ರೈಲು ಪ್ರಯಾಣಿಕರೇ ಗಮನಿಸಿ: ಈ ಮಾರ್ಗದ 24 ರೈಲುಗಳ ಸೇವೆ ರದ್ದು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಈಶಾನ್ಯ ರೈಲ್ವೆ ವಿವಿಧ ಕಡೆಗಳಲ್ಲಿ ಮೂಲ ಸೌಕರ್ಯ ನವೀಕರಣ ಪ್ರಯುಕ್ತ 24 ರೈಲುಗಳ ಸೇವೆಯನ್ನು ರದ್ದುಗೊಳಿಸಿದೆ. ಜುಲೈ ಕೊನೆಯ ವಾರದಿಂದ ಆಗಸ್ಟ್ ಆರಂಭದವರೆಗೆ ಈ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ (uttarpradesh) ಪ್ರಮುಖ ಮಾರ್ಗಗಳಲ್ಲಿ ರೈಲ್ವೆಯು ಮೂಲಸೌಕರ್ಯ ನವೀಕರಣಗಳನ್ನು ಕೈಗೊಂಡಿರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಷಹಜಹಾನ್‌ಪುರ- ಲಖನೌ ಮತ್ತು ರೋಜಾ- ಸೀತಾಪುರ್ ಸಿಟಿ ರೈಲ್ವೆ ವಿಭಾಗಗಳ ನಡುವೆ ನಡೆಯುತ್ತಿರುವ ಹಳಿಗಳ ದ್ವಿಗುಣಗೊಳಿಸುವಿಕೆ ಕಾಮಗಾರಿ ಈ ರದ್ದತಿಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ 12 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಹಲವಾರು ಇತರ ಮಾರ್ಗಗಳನ್ನು ಮಾರ್ಪಡಿಸಲಾಗುತ್ತದೆ.

ಪ್ರಯಾಣಿಕರು ವಿಶೇಷವಾಗಿ ಬಿಹಾರದಿಂದ ವೈಷ್ಣೋದೇವಿ ತೀರ್ಥಯಾತ್ರೆ, ಜಮ್ಮು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಗೆ ಪ್ರಯಾಣಿಸುವವರು ಈ ರದ್ದತಿಯಿಂದಾಗಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಮೂಲಸೌಕರ್ಯ ಕಾರ್ಯಗಳು ಪೂರ್ಣಗೊಂಡ ಅನಂತರ ಅಂದರೆ ಆಗಸ್ಟ್ ಮೊದಲ ವಾರದ ಬಳಿಕ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಈಶಾನ್ಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ರದ್ದುಗೊಂಡ ರೈಲುಗಳು ಯಾವವು?
ಜಮ್ಮು ತಾವಿಯಿಂದ ಬರೌನಿಗೆ ತೆರಳುವ 12492 ಮೌರ್ ಧ್ವಜ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜುಲೈ 26 ಮತ್ತು ಆಗಸ್ಟ್ 2 ರಂದು ರದ್ದಾಗಲಿದೆ.ಅಮೃತಸರದಿಂದ ದರ್ಭಾಂಗಕ್ಕೆ ತೆರಳುವ 15212 ಜನ್ ನಾಯಕ್ ಎಕ್ಸ್‌ಪ್ರೆಸ್ ಜುಲೈ 25 ರಿಂದ ಆಗಸ್ಟ್ 6ರವರೆಗೆ, 14618 ಜನ ಸೇವಾ ಎಕ್ಸ್‌ಪ್ರೆಸ್ ಜುಲೈ 25 ರಿಂದ ಆಗಸ್ಟ್ 5 ರವರೆಗೆ, ಅಮೃತಸರದಿಂದ ಸಹರ್ಸಾಗೆ ತೆರಳುವ 14604 ಜನಸಾಧರನ್ ಎಕ್ಸ್‌ಪ್ರೆಸ್ ಜುಲೈ 24 ರಿಂದ 31 ರವರೆಗೆ, 22552 ಅಂತ್ಯೋದಯ ಎಕ್ಸ್‌ಪ್ರೆಸ್ ಜುಲೈ 28 ರಿಂದ ಆಗಸ್ಟ್ 4 ರವರೆಗೆ, 15904 ಜುಲೈ 31 ಮತ್ತು ಆಗಸ್ಟ್ 4 ರಂದು ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್, ಅಮೃತಸರದಿಂದ ಸಹರ್ಸಗೆ ತೆರಳುವ 12204 ಆಗಸ್ಟ್ 3 ಮತ್ತು 4 ರಂದು ಗರೀಬ್ ರಥ, 15909 ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ಲಾಲ್‌ಘರ್ ಜಂಕ್ಷನ್‌ನಿಂದ ಆಗಸ್ಟ್ 1 ರಿಂದ 4 ರವರೆಗೆ, ಜಮ್ಮು ತಾವಿಯಿಂದ ಗುವಾಹಟಿಗೆ ತೆರಳುವ 15654 ಅಮರನಾಥ್ ಎಕ್ಸ್‌ಪ್ರೆಸ್ ಆಗಸ್ಟ್ 2 ರಂದು, ಸಹರ್ಸಾದಿಂದ ಅಮೃತಸರಕ್ಕೆ ತೆರಳುವ ಜುಲೈ 21 ಮತ್ತು ಆಗಸ್ಟ್ 4 ರಂದು 15531 ಜನಸಾಧರನ್ ಎಕ್ಸ್‌ಪ್ರೆಸ್, ಅಮೃತಸರದಿಂದ ಹೊಸ ಜಲ್ಪೈಗುರಿಗೆ ತೆರಳುವ ಜುಲೈ 19 ಮತ್ತು ಆಗಸ್ಟ್ 2 ರಂದು 12408 ಕರ್ಮಭೂಮಿ ಎಕ್ಸ್‌ಪ್ರೆಸ್ ಡೌನ್ ಟ್ರೈನ್ ಗಳು ರದ್ದುಗೊಂಡಿವೆ.

ಉತ್ತರಪ್ರದೇಶದ ರೈಲುಗಳು
ಬರೌನಿಯಿಂದ ಜಮ್ಮು ತಾವಿಗೆಗೆ ತೆರಳುವ 12491 ಮೌರ್ ಧ್ವಜ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜುಲೈ 28 ಮತ್ತು ಆಗಸ್ಟ್ 4 ರಂದು, ದರ್ಭಾಂಗದಿಂದ ಅಮೃತಸರಕ್ಕೆ ತೆರಳುವ 15211 ಜನ್ ನಾಯಕ್ ಎಕ್ಸ್‌ಪ್ರೆಸ್ ಜುಲೈ 23 ರಿಂದ ಆಗಸ್ಟ್ 4 ರವರೆಗೆ, ಜುಲೈ 27 ರಿಂದ ಆಗಸ್ಟ್ 7 ರವರೆಗೆ 14617 ಜನ ಸೇವಾ ಎಕ್ಸ್‌ಪ್ರೆಸ್, ಸಹರ್ಸಾದಿಂದ ಅಮೃತಸರಕ್ಕೆ ತೆರಳುವ 14603 ಜನಸಾಧರನ್ ಎಕ್ಸ್‌ಪ್ರೆಸ್ ಜುಲೈ 26 ರಿಂದ ಆಗಸ್ಟ್ 2 ರವರೆಗೆ, 22551 ಅಂತ್ಯೋದಯ ಎಕ್ಸ್‌ಪ್ರೆಸ್ ಜುಲೈ 27 ರಿಂದ ಆಗಸ್ಟ್ 3 ರವರೆಗೆ, 15903 ದಿಬ್ರುಗಢ- ಚಂಡೀಗಢ ಎಕ್ಸ್‌ಪ್ರೆಸ್ ಜುಲೈ 29 ಮತ್ತು ಆಗಸ್ಟ್ 2 ರಂದು, ಸಹರ್ಸದಿಂದ ಅಮೃತಸರಕ್ಕೆ ತೆರಳುವ 12203 ಆಗಸ್ಟ್ 4 ಮತ್ತು 5 ರಂದು ಗರೀಬ್ ರಥ, 15910 ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ಜುಲೈ 29 ರಿಂದ ಆಗಸ್ಟ್ 1 ರವರೆಗೆ, ಜುಲೈ 31 ರಂದು ಗುವಾಹಟಿಯಿಂದ ಜಮ್ಮು ತಾವಿಗೆ ತೆರಳುವ 15653 ಅಮರನಾಥ್ ಎಕ್ಸ್‌ಪ್ರೆಸ್, ಸಹರ್ಸಾದಿಂದ ಅಮೃತಸರಕ್ಕೆ ತೆರಳುವ 15531 ಜನಸಾಧರನ್ ಎಕ್ಸ್‌ಪ್ರೆಸ್ ಜುಲೈ 21 ಮತ್ತು ಆಗಸ್ಟ್ 4 ರಂದು, ಹೊಸ ಜಲ್ಪೈಗುರಿಯಿಂದ ಅಮೃತಸರಕ್ಕೆ ತೆರಳುವ 12407 ಕರ್ಮಭೂಮಿ ಎಕ್ಸ್‌ಪ್ರೆಸ್ ಜುಲೈ 24 ಮತ್ತು ಆಗಸ್ಟ್ 7 ರಂದು ರದ್ದಾಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!