ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರೇ ಗಮನಿಸಿ, ಇಂದಿನಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya flyover) ಬಂದ್ ಆಗಲಿದೆ.
ಬರೋಬ್ಬರಿ 22 ಜಿಲ್ಲೆಗಳಿಗೆ ಸಂಪರ್ಕ ಒದಗಿಸುವ ಮುಖ್ಯ ರಸ್ತೆಯಾದ ಪೀಣ್ಯ ಫ್ಲೈಓವರ್‌ನ್ನು ಲೋಡ್ ಟೆಸ್ಟಿಂಗ್‌ಗಾಗಿ ( Load testing) ಬಂದ್ ಮಾಡಲಾಗಿದೆ.
ಲೋಡ್ ಟೆಸ್ಟಿಂಗ್ ಬಗ್ಗೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ( National highway authority of India) ಮೂರು ದಿನಗಳ ಕಾಲ ಪೀರ್ಣ ಫ್ಲೈಓವರ್ ಬಂದ್ ಮಾಡುವಂತೆ ಮನವಿ ಮಾಡಿದೆ. ಅಂತೆಯೇ ಇಂದಿನಿಂದ ಪೊಲೀಸರು ಫ್ಲೈ ಓವರ್ ಬಂದ್ ಮಾಡಲಿದ್ದಾರೆ.
ಇಂದು ರಾತ್ರಿ 11 ಗಂಟೆಯಿಂದ ಜನವರಿ ಬೆಳಗ್ಗೆ 11 ಗಂಟೆವರೆಗೆ ಕ್ಲೋಸ್ ಆಗಲಿದ್ದು, ಹೆವಿ ಗಾಡಿಗಳ ಓಡಾಟ ಪರೀಕ್ಷೆ ನಡೆಸಲಿದ್ದಾರೆ. ಮೂರು ವರ್ಷದಿಂದ ಪೀಣ್ಯ ಫ್ಲೈಓವರ್‌ನಲ್ಲಿ ಭಾರೀ ವಾಹನಗಳನ್ನು ಬಂದ್ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ಗುಣಮಟ್ಟ ಸರಿಯಲ್ಲಿ, ಕಳಪೆ ಕಾಮಗಾರಿ ಎನ್ನುವ ಚರ್ಚೆಗಳು ಆರಂಭವಾಗಿದ್ದವು.