ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ (IPL) ಇತಿಹಾಸದಲ್ಲೇ ಎರಡನೇ ಅತೀ ವೇಗದ ಶತಕ ಗಳಿಸಿದ ಹೆಮ್ಮೆಗೆ ಪಾತ್ರರಾದ ವೈಭವ್ ಸೂರ್ಯವಂಶಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮುಂದಿನ ಆಟಗಳ ಬಗ್ಗೆ ಸಲಹೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮ್ಯಾಥ್ಯೂ ಹೇಡನ್ ಮಾತನಾಡಿದ್ದು, ‘ಕ್ರೀಡೆ ಎಂದರೆ ವ್ಯಕ್ತಿತ್ವ ವಿಕಸನ. ಇದು ತುಂಬಾ ಕಷ್ಟಕರವಾದ ಆಟ. ವೈಭವ್ ಸೂರ್ಯವಂಶಿ ಶತಕ ಗಳಿಸಿದ ನಂತರ ಶೂನ್ಯಕ್ಕೆ ಔಟಾದರು. ಅದು ಆಟ, ನೀವು ಸುಧಾರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ಅತ್ಯಂತ ಮುಖ್ಯವಾದ ವಿಷಯವೆಂದರೆ ಆಟವು ನಿಮಗೆ ಸವಾಲು ಹಾಕುತ್ತವೆ, ಅದಕ್ಕೆ ನೀವು ಒಗ್ಗಿಕೊಂಡು ಆಡಬೇಕು.
ವೈಭವ್ ಸೂರ್ಯವಂಶಿ ಅವರ ಆಟದ ಅತ್ಯುತ್ತಮ ವಿಷಯವೆಂದರೆ ಅದು ಅನೇಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರೂ ಅವರನ್ನು ಕ್ರಿಕೆಟ್ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆತ ಜನರು ತನ್ನನ್ನು ಪ್ರೀತಿಸುವುದನ್ನು ಇಷ್ಟಪಡುತ್ತಾನೆ. ಉಳಿದದ್ದೆಲ್ಲವೂ ತಾನಾಗಿಯೇ ಸರಿಹೋಗುತ್ತದೆ. ಆಟವನ್ನು ಪ್ರೀತಿಸುತ್ತಲೇ ಇರಿ ಎಂಬುದು ನನ್ನ ಸಲಹೆ ಎಂದರು. ಮಾತ್ರವಲ್ಲ ಪ್ರತೀ ಎಸೆತವನ್ನು ಬೌಂಡರಿ ಬಾರಿಸುವ ಇಂಗಿತ ವ್ಯಕ್ತಪಡಿಸುವುದಕ್ಕಿಂತ ಸ್ವಲ್ಪ ಜಾಗರೂಕತೆಯಿಂದ ಬ್ಯಾಟಿಂಗ್ ಮಾಡಿ. ವಿಕೆಟ್ ಮೇಲಿನ ಬಾಲ್‌ಗಳ ಕುರಿತು ಗಮನಹರಿಸಿ ಎಂದರು.