IPL 2023 ಆವೃತ್ತಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ ಆಸಿಸ್‌ ಕ್ರಿಕೆಟಿಗ ಪ್ಯಾಟ್‌ ಕಮಿನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 16ನೇ ಆವೃತ್ತಿಗೆ ಎಲ್ಲಾ 10 ಪ್ರಾಂಚೈಸಿಗಳು ಭರ್ಜರಿ ಸಿದ್ಧತೆ ಆರಂಭಿಸಿವೆ. ಇಂದು (ನ.15) ಆಟಗಾರರ ಟ್ರೆಡಿಂಗ್‌ ಗೆ ಕಡೆಯ ದಿನವಾಗಿದೆ. ಹೀಗಾಗಿ ಎಲ್ಲಾ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ, ಕೈಬಿಡುವ ಆಟಗಾರರ ಪಟ್ಟಿಯನ್ನು ಸಿದ್ದಪಡಿಸುವಲ್ಲಿ ವ್ಯಸ್ತವಾಗಿವೆ. ಈ ನಡುವೆ ಕೆಲವು ಆಟಗಾರರು ಕೆಲ ಅನಿವಾರ್ಯ ಕಾರಣಗಳಿಂದ ಈ ಆವೃತ್ತಿಯ ಐಪಿಎಲ್‌ ತಪ್ಪಿಸಿಕೊಲ್ಳುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೆಕೆಆರ್‌ ವಿಕೆಟ್‌ ಕೀಪರ್‌ ಸ್ಯಾಮ್‌ ಬಿಲ್ಲಿಂಗ್ಸ್‌ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸುವ ನಿಟ್ಟಿನಲ್ಲಿ ಈ ಬಾರಿ ಐಪಿಎಲ್‌ ನಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಕೆಕೆಆರ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ತಂಡದ ಸ್ಟಾರ್‌ ಆಲ್‌ ರೌಂಡರ್‌ ಪ್ಯಾಟ್‌ ಕಮಿನ್ಸ್‌ ಸಹ ಈ ಬಾರಿಯ ಐಪಿಎಲ್‌ ನಲ್ಲಿ ಭಾಗಿಯಾಗುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2023 ರಿಂದ ಹೊರಬರಲು ನಿರ್ಧರಿಸಿದ್ದಾರೆ. ಸ್ಟಾರ್ ಆಲ್ ರೌಂಡರ್ ಮಂಗಳವಾರ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಡುವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ನಿಂದ ಅತಿಯಾದ ಒತ್ತಡವಿರುವುದರಿಂದ ಅನಿವಾರ್ಯವಾಗಿ ಐಪಿಎಲ ನಿಂದ ಹೊರಗುಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ತನ್ನ ನಿರ್ಧಾರವನ್ನು ಅರ್ಥಮಾಡಿಕೊಂಡ ತನ್ನ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. “ಮುಂದಿನ ವರ್ಷ ಐಪಿಎಲ್‌ನಿಂದ ಹೊರಗುಳಿಯುವ ಕಠಿಣ ನಿರ್ಧಾರವನ್ನು ನಾನು ಮಾಡಿದ್ದೇನೆ. ಮುಂದಿನ 12 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವೇಳಾಪಟ್ಟಿಯು ಟೆಸ್ಟ್ ಮತ್ತು ಏಕದಿನಗಳಿಂದ ತುಂಬಿರುತ್ತದೆ, ಆದ್ದರಿಂದ ಆಶಸ್ ಸರಣಿ ಮತ್ತು ವಿಶ್ವಕಪ್‌ಗೆ ಮುಂಚಿತವಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ” ಎಂದು ಕಮ್ಮಿನ್ಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಕಮಿನ್ಸ್‌ ಜೊತೆಗೆ ಆಸಿಸ್‌ ಮಾಜಿ ನಾಯಕ ಆರನ್‌ ಫಿಂಚ್‌ ಸಹ ಐಪಿಎಲ್‌ ನಿಂದ ಹೊರಗುಳಿಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!