ಕೊನೆಗೂ ಆಟೋ ದರ ಏರಿಕೆಗೆ ಸಿಕ್ಕೇಬಿಡ್ತು ಗ್ರೀನ್ ಸಿಗ್ನಲ್: ಹಾಗಿದ್ರೆ ಎಷ್ಟು ದರ ಹೆಚ್ಚಾಗಲಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಹೀಗಾಗಿ ಆಟೋ ದರ ಏರಿಕೆ ಬಹುತೇಕ ಫಿಕ್ಸ್ ಆಗಿದೆ.

ಬೆಂಗಳೂರಿನ ಇನ್​ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದರ ಪರಿಷ್ಕರಣೆಗೆ ಸಮ್ಮತಿಸಲಾಗಿದೆ. ಬಹುತೇಕ ಎಲ್ಲಾ ಆಟೋ ಚಾಲಕ ಸಂಘಟನೆಗಳು ದರ ಏರಿಕೆಗೆ ಸಮ್ಮತಿ ಸೂಚಿಸಿವೆ.

ಒಂದು ವಾರದ ವರೆಗೆ ಆಟೋ ಚಾಲಕ ಸಂಘಟನೆಗಳ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿದೆ. ನಂತರ ಜಿಲ್ಲಾಧಿಕಾರಿಗಳು ಎಷ್ಟು ದರ ಏರಿಕೆ ಮಾಡಬೇಕೆಂದು ಘೋಷಣೆ ಮಾಡಲಿದ್ದಾರೆ.

ಒಂದು ಕಿಲೋಮೀಟರ್​​​ಗೆ 15 ರೂಪಾಯಿ ಇದೆ. ಅದನ್ನು 20 ರೂಪಾಯಿಗೆ ಏರಿಕೆ ಮಾಡಬೇಕು. ಎರಡು ಕಿಮೀ ಗೆ 40 ರೂಪಾಯಿ ಏರಿಕೆ ಮಾಡಬೇಕು ಎಂದು ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!