ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆಯೆನ್ನಲಾದ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುವುದಾಗಿ ವಾರಾಣಸಿಯ ಅವಿಮುಕ್ತೇಶ್ವರಾನಂದ್ ಸ್ವಾಮಿಜಿ ಘೋಷಿಸಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಶಿಷ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದರು ಇತರ 70 ಜನ ಭಕ್ತರೊಂದಿಗೆ ಜ್ಞಾನವಾಪಿಗೆ ಹೋಗಿ ‘ಶಿವಲಿಂಗ’ಕ್ಕೆ ಪ್ರಾರ್ಥನೆ ಸಲ್ಲಿಸುವುದಾಗಿ ಸ್ವಾಮೀಜಿ ಹೇಳಿರುವ ಕುರಿತು ಮೂಲಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ವಾರಾಣಸಿಯ ಕೇದಾರ್ ಘಾಟ್ ಮತ್ತು ಸುತ್ತಮುತ್ತಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಸ್ತುತ ಮಸೀದಿಯ ಒಳಗಡೆ ಹೋಗಲು ಅವಿಮುಕ್ತೇಶ್ವರಾನಂದ್ ಸ್ವಾಮಿಜಿಯವರಿಗೆ ವಾರಾಣಸಿ ಪೋಲೀಸರು ಅನುಮತಿ ನಿರಾಕರಿಸಿದ್ದು ಮಸೀದಿಗಿಂತ ಹಿಂದೆಯೇ ವಿದ್ಯಾಮಠದ ದ್ವಾರದಲ್ಲಿ ಅವರನ್ನು ತಡೆಗಟ್ಟಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.