ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ ಅಭಿಷೇಕ್‌: ಮಗು ಫೋಟೊ ರಿವೀಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಪಾಲಕರಾಗಿದ್ದಾರೆ. ಅವಿವಾ ಅವರು ಗಂಡುಮಗುವಿಗೆ ಇಂದು ಜನ್ಮನೀಡಿದ್ದಾರೆ. ಮಗುವಿನ ಜೊತೆ ಸುಮಲತಾ ಅಂಬರೀಷ್ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಅಭಿಷೇಕ್-ಅವಿವಾ ಕಡೆಯಿಂದ ಗುಡ್​ನ್ಯೂಸ್; ಮಗುವನ್ನು ಮುದ್ದಾಡಿದ ಸುಮಲತಾ

ಅಭಿಷೇಕ್ ಹಾಗೂ ಅವಿವಾ ಅವರು 2023ರಲ್ಲಿ ವಿವಾಹ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ 2024 ಪೂರ್ಣಗೊಳ್ಳುವುದರೊಳಗೆ ಕುಟುಂಬದಿಂದ ಖುಷಿ ಸುದ್ದಿ ಹೊರ ಬಂದಿದೆ. ಇಂದು ಬೆಳಿಗ್ಗೆ 8.30 ಸುಮಾರಿಗೆ ಮಗುವಿನ ಆಗಮನ ಆಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!