ಸಾಮಾಗ್ರಿಗಳು
ಕಡ್ಲೆಬೇಳೆ
ಉದ್ದಿನಬೇಳೆ
ಹುಣಸೆಹುಳಿ
ಜೀರಿಗೆ
ಒಣಮೆಣಸು
ಕಾಯಿತುರಿ
ಅರಿಶಿಣ
ಉಪ್ಪು
ಈರುಳ್ಳಿ
ಕ್ಯಾಪ್ಸಿಕಂ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಕಡ್ಲೆಬೇಳೆ ಉದ್ದಿನಬೇಳೆ ಹುಣಸೆಹುಳಿ ಜೀರಿಗೆ ಒಣಮೆಣಸು ಕಾಯಿತುರಿ ಅರಿಶಿಣ ಶೇಂಗಾ ಕೊತ್ತಂಬರಿ ಕಾಳು ಹಾಕಿ ಬಿಸಿ ಮಾಡಿ
ನಂತರ ಇದನ್ನು ರುಬ್ಬಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಈರುಳ್ಳಿ ಹಾಕಿ, ಖಾರ ಬೇಕಿದ್ದರೆ ಒಂದೆರಡು ಹಸಿಮೆಣಸು ಹಾಕಿ
ನಂತರ ಕ್ಯಾಪ್ಸಿಕಂ ಹಾಕಿ ಬಾಡಿಸಿ
ನಂತರ ಇದಕ್ಕೆ ಮಿಕ್ಸಿ ಮಾಡಿದ ಮಿಶ್ರಣ ಹಾಕಿ ಉಪ್ಪು ಹಾಕಿ
ನಂತರ ಅನ್ನ ಮಿಕ್ಸ್ ಮಾಡಿದ್ರೆ ರೈಸ್ ಬಾತ್ ರೆಡಿ