ಹೊಸದಿಗಂತ ಡಿಜಿಟಲ್ ಡೆಸ್ಕ್:
2024ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇತ್ತೀಚೆಗೆ ಬದಿಯಡ್ಕ ಕಿಳಿಂಗಾರು ಸಾಯಿನಿಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜರಗಿದ ಸಮಾರಂಭದಲ್ಲಿ ಮೊದಲ ಬಹುಮಾನ ಪಡೆದ ಧನ್ಯಶ್ರೀ ಸರಳಿ ಅವರಿಗೆ ಶ್ರೀಗಳು ನಗದು ಸಹಿತ ಪ್ರಶಸ್ತಿಪತ್ರ, ಶಾಶ್ವತ ಫಲಕವನ್ನು ನೀಡಿ ಆಶೀರ್ವದಿಸಿದರು.
ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಾದ ಚೈತನ್ಯ ನಿಡುಬೆ ಮತ್ತು ಸರಸ್ವತಿ ಆರ್.ಜಿ.ಭಟ್ ಕುಂಡಡ್ಕ ವೇಣೂರು ಅವರಿಗೂ ಶ್ರೀಗಳು ನಗದು ಸಹಿತ ಪ್ರಶಸ್ತಿಪತ್ರ, ಶಾಶ್ವತ ಫಲಕವನ್ನು ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕೊಡಗಿನ ಗೌರಮ್ಮ ದತ್ತಿನಿಧಿ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಂಚಾಲಕಿ ವಿಜಯಾಸುಬ್ರಹ್ಮಣ್ಯ, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಉಪಸ್ಥಿತರಿದ್ದರು. ಶೀಲಾ ಲಕ್ಷ್ಮಿ ವರ್ಮುಡಿ ನಿರೂಪಿಸಿದರು.
ಮೊದಲ ಬಹುಮಾನ ಪಡೆದ ಧನ್ಯಶ್ರೀ ಸರಳಿ ಅವರು ಪತ್ರಕರ್ತ, ಛಾಯಾಗ್ರಾಹಕ ಶ್ಯಾಮಪ್ರಸಾದ ಸರಳಿ ಇವರ ಪತ್ನಿ. ಎಂ.ಕಾಂ. ಪದವೀಧರೆಯಾದ ಇವರು ಸ್ವಂತವಾಗಿ ಕಥೆ, ಕವನ, ದೇವರ ನಾಮಸಂಕೀರ್ತನೆಗಳನ್ನು ರಚಿಸಿರುವುದು ಮಾತ್ರವಲ್ಲದೆ ಪುಸ್ತಕ ಅವಲೋಕನವನ್ನೂ ಮಾಡಿದ್ದಾರೆ.