ಸಾನಿಯಾ-ಮಲಿಕ್ ಡಿವೋರ್ಸ್​ ವದಂತಿ ಬೆನ್ನೆಲ್ಲೇ ಇಂಟ್ರೆಸ್ಟಿಂಗ್ ಸಂಗತಿ ಹೇಳಿದ ಆಯೇಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಹರಿದಾಡುತ್ತಿರುವ ವೇಳೆ ಇತ್ತೀಚೆಗೆ ಅವರು ಜೊತೆಯಾಗಿ ಬರ್ತ್ ಡೇ ಅನ್ನು ಆಚರಿಸಿದ್ದರು. ಜೊತೆಯಾಗಿ ಟಿವಿ ಶೋ ಅನ್ನು ಕೂಡ ನಡೆಸುತ್ತಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಇಲ್ಲವೇ ಎಂಬ ಬಗ್ಗೆ ಸಾನಿಯಾ ಆಗಲಿ ಅಥವಾ ಮಲಿಕ್​​ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಇವರ ನಡುವಿನ ಬಿರುಕಿಗೆ ಪಾಕಿಸ್ತಾನಿ ಮಾಡೆಲ್​ ಆಯೇಷಾ ಓಮರ್​ ಕಾರಣ ಎಂಬ ಸುದ್ದಿಯು ಹರಿದಾಡಿತ್ತು. ಈ ಕುರಿತು ಇದೀಗ ​ ಆಯೇಷಾ ಅವರೇ ಉತ್ತರ ನೀಡಿದ್ದಾರೆ.

ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಆಯೇಶಾ ಓಮರ್​ ಇನ್​ಸ್ಟಾಗ್ರಾಂನಲ್ಲಿ ನೀಡಿರುವ ಉತ್ತರ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದಂತಾಗಿದೆ.
‘ನೀವು ಶೋಯಿಬ್​​ ಅವರನ್ನು ಮದುವೆ ಆಗುತ್ತೀರಾ? ನಿಮ್ಮ ನಡುವೆ ಸಂಬಂಧ ಇದೆಯಾ? ಎಂದು ಅಭಿಮಾನಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಆಯೇಶಾ, ಆತ (ಶೋಯಿಬ್​​ ಮಲಿಕ್​) ಸಂತೋಷವಾಗಿ ಮದುವೆ ಆಗಿದ್ದಾನೆ. ದಂಪತಿಯ ವೈಯಕ್ತಿಕ ಜೀವನವನ್ನು ಗೌರವಿಸಬೇಕು. ನಾನು ಮತ್ತು ಶೋಯಿಬ್​​ ಒಳ್ಳೆಯ ಸ್ನೇಹಿತರು ಮತ್ತು ಇತೈಷಿಗಳು. ಹೀಗಿರುವಾಗ ಇಂತಹ ಸಂಬಂಧಗಳನ್ನು ಹುಟ್ಟುಹಾಕುವುದು ಎಲ್ಲೆಡೆ ಸಾಮಾನ್ಯವಾಗಿದೆ’ ಎಂದು ಹೇಳಿದ್ದಾರೆ.

ಈ ಹಿಂದೆ ಶೋಯಿಬ್​​ ಮತ್ತು ಆಯೇಶಾ ಫೋಟೋಶೂಟ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಫೋಟೋಗಳಲ್ಲಿ ತುಂಬಾ ಬೋಲ್ಡ್​ ಆಗಿ ಆಪ್ತರಾಗಿರುವಂತೆ ಪೋಸ್​​ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ವಿವಾಹೇತರ ಸಂಬಂಧ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!