AYODHYA | ಹೋಟೆಲ್ ಉದ್ಯಮದ ಹೊಸ ಹಾಟ್‌ಸ್ಪಾಟ್ ಆಗಿ ರೂಪುಗೊಳ್ಳುತ್ತಿದೆ ಅಯೋಧ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲಾ ಪ್ರಾಣಪ್ರತಿಷ್ಠೆಗೆ ದಿನಗಣನೆ ಆರಂಭವಾಗಿರುವ ಬೆನ್ನಿಗೇ ಇದೀಗ ಅಲ್ಲಿನ ಪ್ರವಾಸೋದ್ಯಮ ಕೂಡಾ ಗರಿಗೆದರಿದೆ.

ದೇಶದ ಪ್ರತಿಷ್ಠಿತ ಹೂಡಿಕೆದಾರರು ಈಗ ಅಯೋಧ್ಯೆಯಲ್ಲಿ ಹೊಟೇಲ್ ಉದ್ಯಮದತ್ತ ಹೂಡಿಕೆಗೆ ಮುಂದಾಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಅಯೋಧ್ಯೆಯಲ್ಲಿ ಖ್ಯಾತ ಹೊಟೆಲ್ ಬ್ರಾಂಡ್‌ಗಳು ತಮ್ಮ ಶಾಖೆಗಳನ್ನು ತೆರೆಯುತ್ತಿವೆ.

ಜೊತೆಗೆ ಈ ಪ್ರದೇಶದಲ್ಲಿ ಕನಿಷ್ಠ ೫೦ ಪ್ರಮುಖ ಹೋಟೆಲ್ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ. ಈ ಬಾರಿ ಕೋಟ್ಯಾಂತರ ಸಂಖ್ಯೆಯಲ್ಲಿ ಅಯೋಧ್ಯೆಗೆ ಭಕ್ತರು ಸಾಗಿಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವಾರು ಸಣ್ಣ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಈ ಪ್ರದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ.

ಇದರ ಪರಿಣಾಮವಾಗಿ ಅಯೋಧ್ಯೆ ಸಧ್ಯ ಹೋಟೆಲ್ ಉದ್ಯಮದ ಹೊಸ ಹಾಟ್‌ಸ್ಪಾಟ್ ಆಗಿ ರೂಪುಗೊಳ್ಳುತ್ತಿದೆ.
ಇದರೊಂದಿಗೆ ಸುಸಜ್ಜಿತ ಹೆದ್ದಾರಿ, ಅಲ್ಲಲ್ಲಿ ಶ್ರೀರಾಮನ ಜೀವನ ಚರಿತ್ರೆ ಬಿಂಬಿಸುವ ಗೋಡೆಯ ವರ್ಣಚಿತ್ರಗಳು, ಬಗೆಬಗೆಯ ದೀಪಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಪ್ರವೇಶದ್ವಾರವು ಪ್ರವಾಸಿಗರನ್ನು, ಆಸ್ತಿಕರನ್ನು ಇಲ್ಲಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!