Sunday, December 10, 2023

Latest Posts

ಅಯೋಧ್ಯ ಬಲಿದಾನ ದಿವಸ್: ಚಿಕ್ಕಮಗಳೂರಿನಲ್ಲಿ ರಕ್ತದಾನ ಕಾರ್ಯಕ್ರಮ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಗುರುವಾರ ನಗರದಲ್ಲಿ ಸಂಘಟನೆ ಕಾರ್ಯಕರ್ತರು ರಕ್ತದಾನ ಮಾಡಿದರು.

ನಗರದ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರಕ್ಕೆ ಚಾಲನೆ ನೀಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ, ರಾಮ ಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಬಜರಂಗದಳದ ರಾಮ್ ಕೊಠಾರಿ ಹಾಗೂ ಶರದ್ ಕೊಠಾರಿ ಸಹೋದರರ ನೆನಪಿಗಾಗಿ ದೇಶಾದ್ಯಂತ ಪ್ರತಿ ವರ್ಷ ವಿಶ್ವ ಹಿಂದೂ ಪರಿಷದ್-ಬಜರಂಗದಳ ರಕ್ತದಾನ ಮಾಡುತ್ತ ಬರುತ್ತಿದೆ ಎಂದು ತಿಳಿಸಿದರು.

ಇದರ ಅಂಗವಾಗಿ ನಗರದಲ್ಲಿ ಈ ಕಾರ್ಯಕ್ರಮವನ್ನು ಚಿಕ್ಕಮಗಳೂರು ನಗರ ಪ್ರಕಂಡ ಆಯೋಜನೆ ಮಾಡಿದೆ. ಕರಸೇವೆಗಾಗಿ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಸಹೋದರರು ೧೯೯೦ ಅಕ್ಟೋಬರ್ ೩೦ರಂದು ೨೦೦ ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಯನ್ನು ತಲುಪುತ್ತಾರೆ. ಕಳಂಕಿತ ಕಟ್ಟಡದ ಮೇಲೆ ಪ್ರಪ್ರಥಮವಾಗಿ ರಾಮ್ ಕೊಠಾರಿ ಭಗವದ್ವಜವನ್ನು ಹಾರಿಸುತ್ತಾರೆ ನಂತರ ಮುಲಾಯಂ ಸಿಂಗ್ ಯಾದವ್ ಸರ್ಕಾರ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಏಕಕಾಲಕ್ಕೆ ಒಂದೇ ಮನೆಯ ಇಬ್ಬರು ಸಹೋದರರು ಮಂದಿರಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ ಎಂದು ವಿವರಿಸಿದರು.

ಅವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ವರ್ಷವಿಡಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ ರಕ್ತದಾನ ಒಂದು ಶ್ರೇಷ್ಠವಾದ ಮಹಾದಾನ. ರಕ್ತದ ಅವಶ್ಯಕತೆ ಇದ್ದಾಗ ಬಜರಂಗದಳ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಇದೇ ಸಂದರ್ಭದಲ್ಲಿ ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಹ ಸಂಯೋಜಕ ಶ್ಯಾಂ ವಿ.ಗೌಡ ತಿಳಿಸಿದರು.

ಶಿಬಿರದಲ್ಲಿ ೫೦ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ರಕ್ತದಾನ ಮಾಡಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ವಿಶ್ವ ಹಿಂದೂ ಪರಿಷದ್ ಮಠ ಮಂದಿರ ಪ್ರಮುಖ ಆಟೋ ಶಿವಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಅಮಿತ್ ಗೌಡ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಗುರು, ನಗರ ಅಧ್ಯಕ್ಷ ದಿಲೀಪ್ ಶೆಟ್ಟಿ, ನಗರ ಕಾರ್ಯದರ್ಶಿ ಕೃಷ್ಣ ನಗರ ಸಂಯೋಜಕ ಸುನಿಲ್, ಸಹ ಸಂಯೋಜಕ ಮಂಜು, ಕೋಟೆ ಶಾಮ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!