Ayodhya | ಶ್ರೀ ರಾಮನ ದರುಶನಕ್ಕೆ ಬರುವ ಜನರಿಗಾಗಿ ‘ದಿವ್ಯಾ ಅಯೋಧ್ಯೆ’ App!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಹೊಸ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದ್ದಾರೆ.

‘ದಿವ್ಯಾ ಅಯೋಧ್ಯೆ’ ಎಂಬ ಹೆಸರಿ ಅಪ್ಲಿಕೇಶನ್ ಅನಾವಣಗೊಂಡಿದ್ದು, ಒನ್-ಸ್ಟಾಪ್ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ, ಪ್ರವಾಸಿಗರು ನಗರಕ್ಕೆ ಕಾಲಿಡುವ ಮೊದಲು ತಮ್ಮ ತೀರ್ಥಯಾತ್ರೆಯ ಬಗ್ಗೆ ಪ್ಲ್ಯಾನ್ ಮಾಡಲು ವಿವರವಾದ ವಿವರಣೆಗಳು ಮತ್ತು ವೇಳಾಪಟ್ಟಿಗಳ ಬಗ್ಗೆ ಮಾಹಿತಿ ನೀಡುತ್ತದೆ.

* Play Store, App Store ನಿಂದ ಡೌನ್ಲೋಡ್ ಮಾಡಿ, ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಿಕೊಳ್ಳಬೇಕು. ಆಯಪ್ ಸ್ಥಳೀಯ ತಿನಿಸು, ನೋಡಲೇಬೇಕಾದ ಸ್ಥಳಗಳು ಮತ್ತು ಪ್ರವಾಸದ ಪ್ಯಾಕೇಜ್ಗಳ ವಿವರಗಳನ್ನು ಸಹ ಒದಗಿಸುತ್ತದೆ.

* ಈ ಆಪ್ ಬಳಸಿಕೊಂಡು ಅಯೋಧ್ಯೆ ನಗರದ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಲ್ಲಿ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ.

* ಇದರಿಂದ ಹೋಮ್-ಸ್ಟೇ, ಹೋಟೆಲ್ ಇತ್ಯಾದಿ ವಸತಿ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.ಈ ಅಪ್ಲಿಕೇಶನ್ ಮೂಲಕ ವೀಲ್ ಚೇರ್, ಗಾಲ್ಫ್ ಕಾರ್ಟ್ ಇತ್ಯಾದಿಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ನೀವು ಗೂಗಲ್ ಪ್ಲೇ ಸ್ಟೋರ್ನಿಂದ Divya Ayodhya ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!