ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಅಂತಿಮ ಹಂತದ ಸಿದ್ಧತೆಗಳು ಕಂಡುಬರುತ್ತಿದೆ.
ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶುಕ್ರವಾರ ಖುದ್ದು ಅಯೋಧ್ಯೆಗೆ ಭೇಟಿ ನೀಡಿದ್ದು, ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸ್ಥಳೀಯ ಅಧಿಕಾರಿಗಳ ಜತೆ ಸರಣಿ ಸಭೆ ನಡೆಸಿದ ಆದಿತ್ಯನಾಥ್, ರಾಮ ಮಂದಿರ ಆವರಣಕ್ಕೂ ಭೇಟಿ ನೀಡಿದರು.
ಸಮಾರಂಭ ಸುಸೂತ್ರವಾಗಿ ನಡೆಯುವಂತೆ ಎಲ್ಲಾ ಏರ್ಪಾಡು ನಡೆಸಲಾಗಿದ್ದು, ಎಲ್ಲೆಡೆ ಸಿಸಿ ಕ್ಯಾಮರಾಗಳು, ಪೊಲೀಸ್ ಕಣ್ಗಾಲು ಇರಿಸಲಾಗಿದೆ.
ಶುಕ್ರವಾರ ಸಂಜೆಯಿಂದ ಸೋಮವಾರದವರೆಗೆ ರಾಮಮಂದಿರಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಪ್ರಾಣ ಪ್ರತಿಷ್ಠಾಪನೆಯ ಮರುದಿನ ಭಕ್ತರು ಮತ್ತು ಸಾರ್ವಜನಿಕರ ಭೇಟಿಗೆ ದೇವಾಲಯ ಮುಕ್ತವಾಗಲಿದೆ.