Monday, March 4, 2024

Ayodhya| ರಾಮ ಮಂದಿರ ಅಪೂರ್ಣ ಎಂದವರಿಗೆ ತಿರುಗೇಟು ನೀಡಿದ ಅರ್ಚಕ ಮಹಾಂತ ದಾಸ್ ಮಹರಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಇದರ ನಡುವೆ ರಾಜಕೀಯವಾಗಿ ವಿವಾದ ಚರ್ಚೆಗೂ ಇನ್ನೊಂದೆಡೆ ನಡೆಯುತ್ತಿದ್ದು, ರಾಮ ಮಂದಿರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಅನ್ನೋದು ವಿಪಕ್ಷಗಳ ಆರೋಪಿಸುತ್ತಿದೆ .

ಇದೀಗ ಈ ಆರೋಪಕ್ಕೆ ಅಯೋಧ್ಯೆ ಅರ್ಚಕ, ಸರಯೂ ಮಹಾ ಆರತಿ ಅಧ್ಯಕ್ಷ ಮಹಾಂತ ದಾಸ್ ಮಹರಾಜ್ ತಿರುಗೇಟು ನೀಡಿದ್ದಾರೆ.

ಜನರು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ. ಪ್ರಾಣಪ್ರತಿಷ್ಠೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ರಾಮ ಮಂದಿರದ ಗರ್ಭಗುಡಿ, ಶಿಖರ ಸಂಪೂರ್ಣ ನಿರ್ಮಾಣಗೊಂಡಿದೆ. ರಾಮ ಮಂದಿರದ ನೆಲಮಹಡಿ ಸಂಪೂರ್ಣ ಪೂರ್ಣಗೊಂಡಿದೆ. ಮೂರ್ತಿ ಪ್ರಾಣಪ್ರತಿಷ್ಠೆಗೆ ಗರ್ಭಗುಡಿ ಹಾಗೂ ಗರ್ಭಗುಡಿ ಶಿಖರ್ ಪ್ರಮುಖ. ಈ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಅಂದು ಸೋಮನಾಥ ಮಂದಿರವನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ನವೀಕರಣ ಮಾಡಿದ್ದರು. ಸೋಮನಾಥ ದೇವಸ್ಥಾನದ ಪ್ರಾಣಪ್ರತಿಷ್ಠ ವೇಳೆ ಗರ್ಭಗುಡಿ, ಶಿಖರ್ ಯಾವುದೂ ಪೂರ್ಣಗೊಂಡಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಕಾಂಗ್ರೆಸ್ ಆಡಳಿತದಲ್ಲಿ ನವೀಕರಣಗೊಂಡು ಪ್ರಾಣಪ್ರತಿಷ್ಠೆಗೊಂಡ ಸೋಮನಾಥ ಮಂದಿರದ ಇತಿಹಾಸ ಕೆದಕಿ ತಿರುಗೇಟು ನೀಡಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕರಸೇವಕರು, ಸಾಧು ಸಂತರು, ಅಸಂಖ್ಯಾತ ರಾಮ ಭಕ್ತರ ಕೊಡುಗೆ ಅಪಾರ. ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ, ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಹೇಳಿದ್ದಾರೆ. ಅಪೂರ್ಣ ಮಂದಿರ ಇದಲ್ಲ, ಪ್ರಾಣಪ್ರತಿಷ್ಠೆಗೆ ಗರ್ಭಗಡಿ ಮುಖ್ಯ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!