ಅಯೋಧ್ಯೆ ರಾಮಲಲಾ ಪ್ರತಿಷ್ಠಾಪನೆ: ಪೂಜೆಯ ಕುರಿತು ಪ್ರಧಾನ ಅರ್ಚಕರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಇನ್ನು ದೇವಾಲಯದ ಪ್ರತಿಷ್ಠಾಪನೆ ಮತ್ತು ಅದರ ಹಿಂದಿನ ಆಚರಣೆಗಳ ಬಗ್ಗೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಒಂದು ಸಮಗ್ರ ಆಚರಣೆಯಾಗಿದೆ, ಆದ್ದರಿಂದ ಪೂಜೆಯು ಜನವರಿ 15 – 16 ರಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದರು. ಜನವರಿ 14 ರಂದು ಧರ್ನುಮಾಸ ಕೊನೆಗೊಳ್ಳುವ ಕಾರಣ ಆಚರಣೆಗಳು ಆರಂಭವಾಗಲಿದೆ ಎಂದಿದ್ದಾರೆ.

ಧರ್ನುಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ, ಆದ್ದರಿಂದ ಅದು ಮುಗಿದ ನಂತರವೇ ರಾಮ ಲಲ್ಲಾ ಪ್ರತಿಷ್ಠಾಪಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ. ಪ್ರಾಣ ಪ್ರತಿಷ್ಠಾನದ ಧಾರ್ಮಿಕ ಕಾರ್ಯಕ್ರಮವು ಜನವರಿ 15 ಮತ್ತು 16 ರಿಂದ ಪ್ರಾರಂಭವಾಗಲಿದೆ. ಪ್ರತಿಮೆಯನ್ನು ‘ನಗರ ಪ್ರವಾಸ’ಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಬಳಿಕ ಇತರೆ ಧಾರ್ಮಿಕ ವಿಧಿ ವಿಧಾನಗಳೂ ನಡೆಯಲಿವೆ ಎಂದೂ ಹೇಳಿದರು.

ನವರಿ 22 ರಂದು ಪ್ರಾಣ-ಪ್ರತಿಷ್ಠೆ ನಡೆಯಲಿದ್ದು, ಅದಕ್ಕೂ ಮುನ್ನ ಇತರೆ ಪೂಜೆ, ವಿಧಾನಗಳು ನಡೆಯಲಿವೆ . ಈ ಎಲ್ಲ ಪ್ರಕ್ರಿಯೆಗಳು ಪ್ರಾಣ ಪ್ರತಿಷ್ಠೆಗೂ ಮುನ್ನ ಪೂರ್ಣಗೊಳ್ಳಲಿವೆ. ಮುಖ್ಯ ಸಮಾರಂಭದಲ್ಲಿ ಮುಖ್ಯ ಕಾರ್ಯಕ್ರಮ ಮಾತ್ರ ಇರುತ್ತದೆ. ಅಂದು ಪ್ರಧಾನಿ ನರೇಂದ್ರ ಮೋದಿ ಕೂಡ ಅಯೋಧ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಆಚಾರ್ಯ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!