Wednesday, February 28, 2024

ಅಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಉತ್ತರ ಕರ್ನಾಟಕ ಭಾಗದ 30 ಲಕ್ಷ ಮನೆಗಳಿಗೆ ಆಮಂತ್ರಣ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಆಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾ ಜ. 22 ರಂದು ನಡೆಯಲಿದೆ. ಇದರ ಅಂಗವಾಗಿ ಉತ್ತರ ಕರ್ನಾಟಕ ಭಾಗವದ 14 ಜಿಲ್ಲೆಯ 11,080 ಗ್ರಾಮಗಳ 30 ಲಕ್ಷ ಮನೆಗಳಿಗೆ ರಾಮ ಮಂದಿರ ಮಂತ್ರಾಕ್ಷತೆ, ಭಾವ ಚಿತ್ರ ಹಾಗೂ ಆಮಂತ್ರಣ ಪತ್ರ ನೀಡಲಾಗುವುದು.

ಈ ಕುರಿತು ವಿದ್ಯಾನಗರ ಶಿರೂರ ಪಾರ್ಕ್‌ನ ವಿಶ್ವ ಹಿಂದೂ ಪರಿಷತ್ ಧರ್ಮಸಿರಿಯಲ್ಲಿ ಅಭಿಯಾನದ ಪ್ರಾಂತ ಸಂಯೋಜಕ ಕೃಷ್ಣಾ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಉತ್ತರ ಕರ್ನಾಟಕ ಭಾಗದ ಎಲ್ಲ ಗ್ರಾಮ ಜನರು ನೀಡಿದ್ದರು. ಕೃತಜ್ಞತೆ ಸಲ್ಲಿಸುವ ಮನೋಭಾವದಿಂದ ಆಮಂತ್ರಣ ಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಅಭಿಯಾನದ ಸಿದ್ಧತೆ ಆರಂಭವಾಗಿದ್ದು, ಜ. 1ರಿಂದ 15 ರವರೆಗೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಮುಖ ಹಾಗೂ ಸಹ ಪ್ರಮುಖರಿಗೆ ಅಭಿಯಾನದ ಜವಾಬ್ದಾರಿ ನೀಡಲಾಗಿದೆ ಎಂದರು.
ಹಿಂದೂ ಸಮಾಜದ ಕಡೆಯಿಂದ ಅಪೇಕ್ಷೆವಿದ್ದು, ಜ. 22 ರಂದು ಬೆಳಿಗ್ಗೆ 11 ಗಂಟೆಗೆ ಅಯೋಧ್ಯಯ ರಾಮ ಮಂದಿರ ನೆಲ ಮಹಡಿಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ನಿವಾಸ ಹತ್ತಿರದ ದೇವಸ್ಥಾನಗಳಲ್ಲಿ ರಾಮನ ಭಕ್ತಿ ಗೀತೆ, ಭಜನೆ, ರಾಮಾಯಣ, ರಾಮ ಮಂದಿರ ಹೋರಾಟದ ಬಗೆಗಿನ ವಿಚಾರಗಳ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ಆಯೋಧ್ಯಯಲ್ಲಿ ನಡೆಯುವ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದು ಸಂಜೆ ಪ್ರತಿಯೊಂದು ಮನೆಯ ಮುಂದೆ ಐದು ದೀಪ ಹಚ್ಚಬೇಕು. ಯಾರು ಸಹ ರ‍್ಯಾಲಿ, ಪಟಾಕಿ ಸಿಡಿಸದೆ ಭಕ್ತಿ, ಆರಾಧನ ರೂಪಕವಾಗಿ ಸಂಭ್ರಮಿಸಬೇಕು. ಡಿ. 22 ರಂದು ಕೇಶ್ವಾಪುರದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ರಾಮಮಂದಿರ ಮಂತ್ರಾಕ್ಷತೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!