ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದ್ದು, ದಸರಾ ಹಬ್ಬದ ಕೊನೆಯ ದಿನ ಶಸಾಸ್ತ್ರ ಹಾಗೂ ಸಾಧನಗಳನ್ನು ಪೂಜೆಸಲಾಗುತ್ತದೆ. ಮನೆ ಹಾಗೂ ಕಚೇರಿಯನ್ನು ಹೂಗಳಿಂದ ಅಲಂಕರಿಸಿ, ಶಸಾಸ್ತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಪ್ರತಿ ಮನೆಯಲ್ಲಿಯೂ ತಮ್ಮ ವಾಹನಗಳು, ಟಿವಿ, ಫ್ರಿಡ್ಜ್ ಹಾಗೂ ಇತರ ಯಂತ್ರಗಳಿಗೆ ಪೂಜೆ ಮಾಡಲಾಗುತ್ತದೆ. ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ದೇವಿಯನ್ನು ಪೂಜೆಸಲಾಗುತ್ತಿದೆ. ಯಂತ್ರಗಳು, ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಮೈಸೂರಿನ ಅರಮನೆ ಮೈದಾನದೊಳದೆ ರಾಜಮನೆತನದಿಂದ ಆಯಧ ಪೂಜೆಯನ್ನು ಆಚರಿಸಲಾಗುತ್ತಿದೆ.
ಆಯುಧ ಪೂಜೆಗೆ ಐತಿಹಾಸಿಕ ದಂತಕಥೆವಿದೆ. ದುರ್ಗಾ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜೆಸಲಾಯಿತು. ಹಾಗಾಗಿಯೇ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎಂಬ ಕಥೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.