ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಮೈಸೂರು ಅರಮನೆಯಲ್ಲೂ ಆಯುಧ ಪೂಜೆಯ ಕೈಂಕರ್ಯಗಳು ಆರಂಭಗೊಂಡಿವೆ.
ಇಂದು ಬೆಳಗ್ಗೆ 5.30ಕ್ಕೆ ಚಂಡಿಹೋಮದಿಂದ ಪೂಜಾ ವಿಧಿವಿಧಾನಗಳು ಆರಂಭಗೊಂಡಿದೆ. ಈ ವಿಶೇಷ ದಿನದಂದು ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಅರಮನೆಯ ಪೂಜಾ ಕಾರ್ಯಕ್ರಮಗಳ ವಿವರ
ಇಂದು ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಕಾರ್ಯಕ್ರಮ ನಡೆಯುತ್ತದೆ.
ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಹಸು ಆಗಮನ.
ಮಧ್ಯಾಹ್ನ 12.20ರಿಂದ ಮೈಸೂರು ಅರಮನೆಯಲ್ಲಿ ಆಯುಧಪೂಜೆ ಆರಂಭವಾಗುತ್ತದೆ.
ಮಧ್ಯಾಹ್ನ 12.45ರವರೆಗೆ ಆಯುಧಪೂಜೆ ನಡೆಯುತ್ತವೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ.
ಸಂಜೆ ಖಾಸಗಿ ದರ್ಬಾರ್ ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜಿಸಲಾಗುತ್ತದೆ. ಬಳಿಕ ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಕಾರ್ಯಕ್ರಮ ನಡೆಯಲಿದೆ.
ನಂತರ ಯದುವೀರ್ ಅವರು ಅಮಲದೇವಿ ದರ್ಶನ ಪಡೆಯುತ್ತಾರೆ. ಈ ಮೂಲಕ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯಗೊಳ್ಳುತ್ತದೆ.