ಖ್ಯಾತ ವೈದ್ಯ ಉರಾಳ್ ಅವರಿಗೆ ಸನ್ಮಾನ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧಕರನ್ನು ಸನ್ಮಾನಿಸುವ ಸಮಾರಂಭದಲ್ಲಿ ಆಯುರ್ವೇದ ವೈದ್ಯರು, ವಿಶೇಷವಾಗಿ ವೆರಿಕೋಸ್ ವೇಯ್ನ್ ಕಾಯಿಲೆಗೆ ಶಸ್ತ್ರಚಿಕಿತ್ಸೆಯಿಲ್ಲಗೇ ಗುಣವಾಗುವ ಔಷಧ ನೀಡುವುದರಲ್ಲಿ ಹೆಸರು ಮಾಡಿರುವ ಎಂ. ವಿ. ಉರಾಳ್ ಅವರನ್ನು ಗೌರವಿಸಲಾಯಿತು.

ಸಂಜೆಪ್ರಭ ಪತ್ರಿಕೆಯು ತನ್ನ 10ನೇ ವರ್ಷಾಚರಣೆ ಪ್ರಯುಕ್ತ ಸಾಮಾಜಿಕ ರತ್ನ ಎಂಬ ಗೌರವದಡಿ ಸಮಾಜದ ನಾನಾ ವಲಯಗಳಲ್ಲಿ ಕೆಲಸ ಮಾಡಿರುವವರನ್ನು ಗೌರವಿಸಿತು. ಆಯುರ್ವೇದದ ಮೂಲಕ ಕಡಿಮೆ ವೆಚ್ಚದಲ್ಲಿ ವೆರಿಕೋಸ್ ವೇಯ್ನ್ ನಂತಹ ಗಂಭೀರ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಹಲವರಿಗೆ ನೆಮ್ಮದಿ ನೀಡಿರುವ ವೈದ್ಯ ಉರಾಳ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಂತೋಷ್ ಗುರೂಜಿ ಪ್ರಶಸ್ತಿ ಫಲಕಗಳನ್ನು ಪ್ರದಾನಿಸಿ ಗೌರವಿಸಿದರು.

ವೆರಿಕೋಸ್ ವೇಯ್ನ್ ಗಳ ಪರಿಹಾರಕ್ಕೆಂದು ಆಯುರ್ವೇದದಲ್ಲಿ ಹೊಸ ಔಷಧಿಯ ಆವಿಷ್ಕಾರ ಮಾಡಿದ್ದಾರೆ. ಇವರು ಮೂಲತಃ ಉಡುಪಿ ಜಿಲ್ಲೆಯವರು. ಕೊಪ್ಪದಲ್ಲಿ ಆಯುರ್ವೇದ ಕೋರ್ಸ್ (ಬಿ.ಎ.ಎಂ.ಎಸ್) ಪೂರೈಸಿದ್ದಾರೆ. ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಅವರು ಶಸ್ತ್ರ ಚಿಕಿತ್ಸೆ ಇಲ್ಲದೆ ವೆರಿಕೋಸ್ ವೈಯ್ನ್ ಅನ್ನು ಕಡಿಮೆ ಮಾಡುವಂತ ಔಷಧ ಸಿದ್ಧಪಡಿಸಿದ್ದಾರೆ. ಈವರೆಗೆ 3,000 ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿ ವೆರಿಕೋಸ್ ವೇಯ್ನ್ ಗುಣಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!