ಉತ್ತಮ ಆರೋಗ್ಯಕ್ಕಾಗಿ ʻಸನ್‌ ಚಾರ್ಜ್ಡ್‌ ವಾಟರ್‌ʼ ಕುಡಿಯಲು ಆಯುರ್ವೇದ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಹಕ್ಕೆ ಬೇಕಾದ ʻವಿಟಮಿನ್ ಡಿʼ ಪೂರೈಕೆ ಸೂರ್ಯನ ಬೆಳಕಿನಿಂದ ಸಾಕಷ್ಟು ಸಿಗುತ್ತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆ ಆಯುರ್ವೇದದಲ್ಲಿ ತಿಳಿಸಿರುವ ʻಸನ್ ಚಾರ್ಜ್ಡ್ ವಾಟರ್‌ʼ ಬಗ್ಗೆ ನಿಮಗೆ ತಿಳಿದಿದ್ಯಾ..? ಆಯುರ್ವೇದದ ಪ್ರಕಾರ, ಸೂರ್ಯನ ಬೆಳಕು ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಹಾಗೆ ಖ್ಯಾತ ಆಯುರ್ವೇದ ತಜ್ಞೆ ಡಾ ನಿತಿಕಾ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸೂರ್ಯನ ಕಿರಣಗಳಿಂದ ಬಿಸಿಯಾದ ನೀರು ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಸೂರ್ಯನಿಂದ ಚಾರ್ಜ್ ಆಗುವ ನೀರು ಆಂಟಿ-ವೈರಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇವು ಆರೋಗ್ಯ ಸಮಸ್ಯೆಗಳು ಮತ್ತು ಚರ್ಮದ ಸಮಸ್ಯೆಗಳನ್ನು ದೂರವಿಡುತ್ತವೆ.

* ದಿನವಿಡೀ ನಿರ್ಜಲೀಕರಣದ ಅನುಭವವಿದ್ದರೆ ಸನ್ ಚಾರ್ಜ್ಡ್‌ ನೀರನ್ನು ಕುಡಿಯುವುದು ಉತ್ತಮ.

* ಇದು ತ್ವಚೆಗೂ ತುಂಬಾ ಒಳ್ಳೆಯದು. ಚರ್ಮದಲ್ಲಿನ ದದ್ದು ಮತ್ತು ಕೆಂಪಾಗುವಿಕೆಯನ್ನು ಗುಣಪಡಿಸುವುದರ ಜೊತೆಗೆ ಚರ್ಮವನ್ನು ಕಾಂತಿಯುತವಾಗಿಸುತ್ತದೆ.

* ನೀವು ಕಣ್ಣು ಅಥವಾ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸೂರ್ಯನ ಕಿರಣಗಿಳಿಂದ ಬಿಸಿಯಾದ ನೀರಿನಿಂದ ತೊಳೆಯಿರಿ ಎಂದು ತಜ್ಞೆ ಸಲಹೆ ನೀಡಿದ್ದಾರೆ.

* ಸೂರ್ಯನಿಂದ ಚಾರ್ಜ್ ಮಾಡಿದ ನೀರು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ನಿಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ತೋರಿಸುವುದಿಲ್ಲ.

ಸನ್ ಚಾರ್ಜ್ಡ್ ವಾಟರ್ ಮಾಡುವುದು ಹೇಗೆ?

* ಗಾಜಿನ ಬಾಟಲಿಗೆ ನೀರು ತುಂಬಿಸಿ ಕನಿಷ್ಠ 8 ಗಂಟೆಗಳ ಕಾಲ ಬಿಸಿಲಿನಲ್ಲಿ ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಮೂರು ದಿನಗಳ ಕಾಲ 8 ಗಂಟೆಗಳವರೆಗೆ ಬಿಸಿಲಿನಲ್ಲಿ ಇಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!