ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಆಯುಷ್ಮಾನ್ ಭವ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಹುಟ್ಟುಹಬ್ಬದ ದಿನ (ಸೆ.17) ಕೇಂದ್ರ ಆರೋಗ್ಯ ಇಲಾಖೆಯು (Health Ministry) ಆಯುಷ್ಮಾನ್ ಭವ (Ayushman Bhava) ಎಂಬ ಅಭಿಯಾನವನ್ನು ಆರಂಭಿಸಲಿದೆ.

ದೇಶದ ಆರೋಗ್ಯ ಮತ್ತು ಆಹಾರ ಕ್ಷೇತ್ರಕ್ಕೆ ಮೋದಿ ನೀಡಿದ ಕೊಡುಗೆಯನ್ನು ಅಭಿಯಾನ ಮೂಲಕ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯಾ (Union health minister Mansukh Mandaviya) ಅವರು ಹೇಳಿದ್ದಾರೆ.

ಸೆಪ್ಟೆಂಬರ್ 17 ರಿಂದ ‘ಆಯುಷ್ಮಾನ್ ಭವ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತೇವೆ. ಪ್ರಧಾನಿ ಅವರು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾನವಕುಲದ ಸೇವೆಗೆ ಹೆಸರುವಾಸಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಹೇಳಿದರು.

ಸೆಪ್ಟೆಂಬರ್ 17ರಂದು ಕೇಂದ್ರವು ಈ ಅಭಿಯಾನವನ್ನು ನಡೆಸಲು ಏಕೆ ನಿರ್ಧರಿಸಿದೆ ಎಂಬುದನ್ನು ವಿವರಿಸಿದ ಮಾಂಡವಿಯಾ, “ಪ್ರಧಾನಿ ಮೋದಿ ಅವರು 60 ಕೋಟಿ ಜನರಿಗೆ 5 ಲಕ್ಷ ಮೌಲ್ಯದ ಉಚಿತ ವೈದ್ಯಕೀಯ ಸಹಾಯವನ್ನು ಖಾತರಿಪಡಿಸಿದ್ದಾರೆ. ಅವರು ಶೋಷಿತ ಮತ್ತು ವಂಚಿತ ಜನಸಂಖ್ಯೆಯ ಅನುಕೂಲಕ್ಕಾಗಿ ಮತ್ತು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ನಾವು ಸೆಪ್ಟೆಂಬರ್ 17 ರಿಂದ ‘ಆಯುಷ್ಮಾನ್ ಭವ’ ಅಭಿಯಾನ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ನಾವು ಆರೋಗ್ಯ ಗುರಿ ಸೇವೆಗಳನ್ನು ಉತ್ತೇಜಿಸುತ್ತೇವೆ ಮತ್ತು ಪ್ರತಿಯೊಬ್ಬ ಉದ್ದೇಶಿತ ಫಲಾನುಭವಿಗೆ ಭಾರತ ಸರ್ಕಾರವು ನಡೆಸುವ ಎಲ್ಲಾ ಆರೋಗ್ಯ ಯೋಜನೆಗಳ ಅತ್ಯುತ್ತಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!