ಭಾರತ- ಪಾಕಿಸ್ತಾನ ಪಂದ್ಯಕ್ಕೆ ಮತ್ತೆ ಮಳೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಭಾರತ, ಪಾಕಿಸ್ತಾನ ಪಂದ್ಯಕ್ಕೆ ಮತ್ತೆ ಮಳೆ ಎಂಟ್ರಿಕೊಟ್ಟಿದ್ದು, ಪಾಕ್ ಎರಡನೇ ಇನ್ನಿಂಗ್ಸ್​ ಆರಂಭಿಸಿ 11 ಓವರ್ ಆಗುತ್ತಿದ್ದಂತೆ ಮಳೆ ಬಂದು ಪಂದ್ಯ ನಿಂತಿದೆ. ​

ಮೀಸಲು ದಿನದ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ ಆಡಿದ್ದು, 357 ರನ್​​ಗಳ ಬೃಹತ್​ ಗುರಿಯನ್ನು ನೀಡಿದೆ.

ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 11ನೇ ಓವರ್​ಗೆ 2 ವಿಕೆಟ್​ ಕಳೆದುಕೊಂಡು 44 ರನ್​ ಗಳಿಸಿದೆ. ಪಾಕಿಸ್ತಾನದ ಆರಂಭಿಕ ಬ್ಯಾಟರ್​ ಇಮಾಮ್​ ಉಲ್​ ಹಕ್​ 9 ರನ್​ಗೆ ಮತ್ತು ತಂಡದ ನಾಯಕ ಬಾಬರ್​ ಅಜಮ್​ 10 ರನ್​ಗೆ ವಿಕೆಟ್​ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!