ತಮಿಳುನಾಡು ಹಿಂದುದತ್ತಿ ಇಲಾಖೆಯಿಂದ ಅಯ್ಯಪ್ಪ ಯಾತ್ರಿಗೆ ಥಳಿತ? – ಧ್ವನಿ ಎತ್ತಿದ ಅಣ್ಣಾಮಲೈ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಯ್ಯಪ್ಪ ಯಾತ್ರಿಯೊಬ್ಬರು ರಕ್ತಸಿಕ್ತರಾಗಿ ನೆಲದ ಮೇಲೆ ಕುಳಿತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ತಮ್ಮ ಎಕ್ಸ್ ತಾಣದ ಮೂಲಕ ಇದರ ಹಿನ್ನೆಲೆಯನ್ನು ವಿವರಿಸಿ, ಡಿಎಂಕೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅಣ್ಣಾಮಲೈ ಅವರು ವಿವರಿಸಿರುವ ಪ್ರಕಾರ ಈ ಅಯ್ಯಪ್ಪ ಭಕ್ತ ತಮ್ಮ 42 ದಿನಗಳ ವೃತದ ಶಬರಿಮಲೈ ಯಾತ್ರೆ ಮುಗಿಸಿ ಹಿಂತಿರುಗುತ್ತ ಮಾರ್ಗಮಧ್ಯೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಪ್ರಾರ್ಥನೆಗೆಂದು ಪ್ರವೇಶಿಸಿದ್ದಾರೆ. ಸರ್ಕಾರಿ ನಿಯಂತ್ರಣದಲ್ಲಿರುವ ಈ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಅಲ್ಲದೇ, ತಮಗೆ ಬೇಕಾದವರನ್ನು ಸಾಲು ತಪ್ಪಿಸಿ ಮುಂದಕ್ಕೆ ಬಿಡುವ ಕೆಲಸವೂ ಅಧಿಕಾರಿಗಳಿಂದ ಆಗಿದೆ. ಇದನ್ನು ಪ್ರಶ್ನಿಸಿದ ಅಯ್ಯಪ್ಪ ಭಕ್ತನನ್ನು ರಕ್ತ ಬರುವಂತೆ ಹೊಡೆಯಲಾಗಿದೆ.

ಹಿಂದುಗಳ ಬಗ್ಗೆ ಆಸ್ಥೆಯೇ ಇರದಿರುವ ಡಿಎಂಕೆ ಸರ್ಕಾರವು ತನ್ನ ಅಧಿಕಾರಿಗಳನ್ನು ದೇವಾಲಯದಲ್ಲಿ ಇಟ್ಟಿರುವುದೇ ತಪ್ಪು ಎಂದು ಅಣ್ಣಾಮಲೈ ಹರಿಹಾಯ್ದಿದ್ದಾರೆ. ಈ ಗೂಂಡಾವರ್ತನೆ ಖಂಡಿಸಿ ತಿರುಚಿಯ ಬಿಜೆಪಿ ಘಟಕವು ತಮಿಳುನಾಡು ಸರ್ಕಾರದ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಣ್ಣಾಮಲೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!