ಆಜಾದಿ ಕಾ ಅಮೃತ ಮಹೋತ್ಸವ: ಅಂಕೋಲದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಹೊಸದಿಗಂತ ವರದಿ, ಅಂಕೋಲಾ:

ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆ ವತಿಯಿಂದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಐತಿಹಾಸಿಕ ದಾಖಲೆಗಳ ಪ್ರದರ್ಶನವನ್ನು ಶುಕ್ರವಾರ ಬೆಳಿಗ್ಗೆ ಪದ್ಮಶ್ರೀ ತುಳಸಿ ಗೌಡ ಹೊನ್ನಳ್ಳಿ  ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರ ಉಳಿಯಬೇಕಾದರೆ ಗಿಡಗಳನ್ನು ನೆಡುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು. ಹೀಗಾಗಿ ಪ್ರತಿಯೊಬ್ಬರೂ ಗಿಡ ನೆಡುವ ಕಾರ್ಯ ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಇಂಡೋ ಪೋರ್ಚುಗೀಸ್ ಲಿಟರರಿ ಫೌಂಡೇಶನ್  ನಿರ್ದೇಶಕ ಡಾ. ಅರವಿಂದ ವಿ. ಯಾಳಗಿ
ಇನ್ನೋರ್ವ ಮುಖ್ಯ ಅತಿಥಿಗಳಾಗಿ  ಧಾರವಾಡ ಪ್ರಾದೇಶಿಕ ಪತ್ರಾಗಾರದ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ  ಮಾತನಾಡಿದರು.
ಕೆ.ಎಲ್.ಇ. ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮಿನಲ್ ನಾರ್ವೇಕರ್ ಅಧ್ಯಕ್ಷತೆ ವಹಿಸಿದ್ದರು.
ದಿವ್ಯಾ ಸಂಗಡಿಗರು ಪ್ರಾರ್ಥಿಸಿದರು.ಕೆ.ಎಲ್.ಇ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ ಸ್ವಾಗತಿಸಿದರು. ಬಿ.ವಿ.ಕಾವ್ಯ ಪರಿಚಯಿಸಿದರು.
ಉಪನ್ಯಾಸಕ ಮಂಜುನಾಥ ಇಟಗಿ ವಂದಿಸಿದರು. ಪ್ರಶಿಕ್ಷಣಾರ್ಥಿ ಪೂರ್ವಿ ಹಳಗೇಕರ್ ನಿರ್ವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!