ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅಜಂ ಖಾನ್: ಕೇಸ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನ ಕಳೆದುಕೊಂಡಿರುವ ಸಮಾಜವಾದಿ ಪಕ್ಷದ(ಎಸ್ಪಿ) ನಾಯಕ ಅಜಂ ಖಾನ್ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶುತಾ ಖಾನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಸ್ ಪಿ ನಾಯಕ ಮಾಡಿದ ಭಾಷಣದ ಆಡಿಯೋ ಫೈಲ್ ಮೂಲಕ ಶೆಹನಾಜ್ ಬೇಗಂ ಎಂಬ ಮಹಿಳೆ ಅಜಂ ಖಾನ್ ಅವರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ಅಜಮ್ ಖಾನ್ ಸಭೆಯಲ್ಲಿ, “ನಾನು ಎಸ್ಪಿ ಸರ್ಕಾರದಲ್ಲಿ ನಾಲ್ಕು ಅವಧಿಗೆ ಸಚಿವನಾಗಿದ್ದೆ. ಆದರೆ ಈಗೀನ ಬಿಜೆಪಿ ಸರ್ಕಾರದ ರೀತಿ ಅಧಿಕಾರ ನಡೆಸಿದ್ದರೆ ಆಗ ಹುಟ್ಟುವ ಮಕ್ಕಳು ತಾವು ಹುಟ್ಟಲು ಅಜಂ ಖಾನ್ ಅನುಮತಿ ನೀಡಿದ್ದಾರಾ ಎಂದು ತಮ್ಮ ತಾಯಿಯನ್ನು ಕೇಳುತ್ತಿದ್ದರು ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯ ದೂರಿನ ಆಧಾರದ ಮೇಲೆ, ಗಂಜ್ ಪೊಲೀಸರು ಅಜಂ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 394 (ಬಿ), 354 ಎ, 353 (ಎ), 504, 505 (2), 509 ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!