ಹೊಸದಿಗಂತ ವರದಿ, ಮೈಸೂರು:
ಬಿಜೆಪಿ ರಾಜ್ಯಧ್ಯಕ್ಷರಾಗಿ ಶಾಸಕ ಬಿ.ವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯ ವಾರ್ಡ್ ನಂಬರ್ 24ರ ಕಾರ್ಯಕರ್ತರ ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು
ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೇಬಲ್ ವಿಜಿ, ಗಣೇಶ್, ಕೆಂಪಣ್ಣ, ಉಮೇಶ್, ಸೂರಜ್, ಕಾರ್ತಿಕ್, ದಿ ಮೈಸೂರು ಕೋ-ಆಪ ರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರ ಹಳ್ಳಿ ಎಂ.ರಾಮಕೃಷ್ಣ, ಹೇಮಾ ಸಂತೋಷ್, ರವಿ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.