ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಇದೀಗ ಔಟರ್ ರಿಂಗ್ ರೋಡ್ ಮಾರ್ಗದಲ್ಲಿರುವ DRDO Sports Complex Metro Station ನಿಲ್ದಾಣಕ್ಕೆ ‘ಬಾಗ್ ಮಾನೆ’ ಎಂಬ ಹೆಸರು ನೀಡಲು ಒಪ್ಪಂದ ಅಂತಿಮಗೊಂಡಿದೆ.
Bangalore Metro Rail Corporation Limited ಮತ್ತು ಬಾಗ್ ಮಾನೆ ಡೆವಲಪರ್ಸ್ ನಡುವೆ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. 20 ವರ್ಷಗಳ ಅವಧಿಗೆ ಮಾನ್ಯವಾಗಿರುವ ಈ ಒಪ್ಪಂದದ ಭಾಗವಾಗಿ, ಕಂಪನಿ ಈಗಾಗಲೇ 20 ಕೋಟಿ ರೂಪಾಯಿಯನ್ನು ಮುಂಗಡವಾಗಿ ಪಾವತಿಸಿದೆ.
ಇದನ್ನೂ ಓದಿ:
ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂವರೆಗೆ ಸಾಗುವ ಪ್ರಮುಖ ಮಾರ್ಗದಲ್ಲಿರುವ ಈ ನಿಲ್ದಾಣವು ವಿಮಾನ ನಿಲ್ದಾಣ ಸಂಪರ್ಕಕ್ಕೆ ಪ್ರಮುಖ ಕೊಂಡಿಯಾಗಿದೆ. 19.75 ಕಿಲೋಮೀಟರ್ ಉದ್ದದ ಈ ಮಾರ್ಗವು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಇಂತಹ ಒಪ್ಪಂದಗಳಿಂದ ಮೆಟ್ರೋ ಸಂಸ್ಥೆಗೆ ಹೆಚ್ಚುವರಿ ಆದಾಯ ಲಭ್ಯವಾಗುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ನೆರವಾಗಲಿದೆ.



