April 25, 2026
Saturday, April 25, 2026
spot_img

RCB ಜಬರ್ದಸ್ತ್ ಶೋ: ‘ಪರ್ಫೆಕ್ಟ್ ಸ್ಟಾರ್ಟ್’ ಎಂದ ಡಿಕೆ ಪೋಸ್ಟ್‌ಗೆ ಫಿಲ್ ಸಾಲ್ಟ್ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹಿನ್ನಲೆಯಲ್ಲಿ ಫಿಲ್ ಸಾಲ್ಟ್ ಅವರ ಫೀಲ್ಡಿಂಗ್ ಮಹತ್ವದ ಪಾತ್ರ ವಹಿಸಿದ್ದು, ಬ್ಯಾಟಿಂಗ್‌ನಲ್ಲಿ ಕಾಣಿಸದಿದ್ದರೂ ಮೈದಾನದಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಪಂದ್ಯದ ದಿಕ್ಕನ್ನೇ ಬದಲಿಸಿದರು.

ಸನ್‌ರೈಸರ್ಸ್ ತಂಡದ ಅಪಾಯಕಾರಿ ಆಟಗಾರರಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್‌ಗಳನ್ನು ಸಾಲ್ಟ್ ಹಿಡಿದ ಕ್ಯಾಚ್‌ಗಳು ನಿರ್ಣಾಯಕವಾಗಿದ್ದವು. ಈ ಇಬ್ಬರ ಔಟ್ ಆದ ಬಳಿಕ ಹೈದರಾಬಾದ್ ತಂಡದ ರನ್‌ ವೇಗ ಕುಂಠಿತಗೊಂಡಿತು.

ಇದನ್ನೂ ಓದಿ:

ಈ ನಡುವೆ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಪಂದ್ಯಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡು “ಪರ್ಫೆಕ್ಟ್ ಸ್ಟಾರ್ಟ್” ಎಂದು ಬರೆದಿದ್ದರು. ಆದರೆ ಸಾಲ್ಟ್ ಹಿಡಿದ ಕ್ಯಾಚ್‌ಗಳ ಫೋಟೋಗಳು ಕಾಣಿಸದಿದ್ದರಿಂದ, ಫಿಲ್ ಸಾಲ್ಟ್ “ಕ್ಯಾಚ್ ಮಾಸ್ಟರ್‌ಮೈಂಡ್‌ಗೆ ಏನೂ ಇಲ್ವಾ? ನಾಚಿಕೆಗೇಡು” ಎಂದು ಕಾಮೆಂಟ್ ಮಾಡಿದ್ದಾರೆ.

ಈ ಕಾಮೆಂಟ್ ಈಗ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಸಾಲ್ಟ್ ಪ್ರದರ್ಶನಕ್ಕೆ ಹೆಚ್ಚಿನ ಮೆಚ್ಚುಗೆ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !