ಕೀಪರ್‌ ಗ್ಲೌವ್ಸ್‌ ಧರಿಸಿ ಫೀಲ್ಡಿಂಗ್‌ ಮಾಡಿ ಕಳ್ಳಾಟವಾಡಿದ ಪಾಕಿ ನಾಯಕ; ಪಾಕ್‌ ತಂಡಕ್ಕೆ ಬಿತ್ತು ಫೆನಾಲ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಲ್ಲಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಪಾಕಿಸ್ತಾನಿ ನಾಯಕ ಬಾಬರ್ ಅಜಮ್ ಅಕ್ರಮ ಫೀಲ್ಡಿಂಗ್‌ನಲ್ಲಿ ಭಾಗಿಯಾಗಿದ್ದು ಕ್ರೀಡಾವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಾಕ್‌ ತಂಡವು ಮತ್ತೆ ಕಳ್ಳಾಟದಲ್ಲಿ ತೊಡಗಿದೆ. ಪಾಕ್‌ ಆಟಗಾರರಿಗೆ ಐಸಿಸಿ ಕ್ರಿಕೆಟ್‌ ನಿಯಮಗಳೇ ಗೊತ್ತಿಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಪಾಕ್ ‌ನಾಯಕ ಬಾಬರ್‌ ಅಜಂ ಹಾಗೂ ಇಮಾಮ್‌ ಉಲ್‌ ಹಕ್‌ ಅರ್ಧಶತಕಗಳ ಬಲದಿಂದ ಪ್ರವಾಸಿ ವೆಸ್ಟ್ ಇಂಡೀಸ್ ಗೆ 276 ರನ್ ಗುರಿಯನ್ನು ನೀಡಿತ್ತು. ವೆಸ್ಟಿಂಡೀಸ್ ಚೇಸಿಂಗ್ ಸಂದರ್ಭದಲ್ಲಿ ಈ ವಿಲಕ್ಷಣ ಘಟನೆ ಸಂಭವಿಸಿದೆ. 29ನೇ ಓವರ್‌ನಲ್ಲಿ ಸ್ಪಿನ್ನರ್ ಮೊಹಮ್ಮದ್ ನವಾಜ್ ಮೊದಲ ಎಸೆತದಲ್ಲಿ ಸ್ಲಿಪ್‌ ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಬಾಬರ್‌ ಅಜಂ ಅವರು ವಿಕೆಟ್‌ ಕೀಪಿಂಗ್ ಗ್ಲೌಸ್ ಧರಿಸಿ ಬ್ಯಾಟ್ಸ್‌ ಮನ್‌ ಅಲ್ಜಾರಿ ಜೋಸೆಫ್ ಸ್ಕ್ವೇರ್ ಲೆಗ್ ಹೊಡೆದ ಚೆಂಡನ್ನು ತಡೆದರು. ಅಜಂ ಈ ನಡೆ ಕ್ರಿಕೆಟ್‌ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಕ್ರಿಕೆಟ್‌ನ ಕಾನೂನಿನ ಪ್ರಕಾರ, ವಿಕೆಟ್ ಕೀಪರ್ ಹೊರತುಪಡಿಸಿ ಬೇರ್ಯಾವುದೇ ಕ್ಷೇತ್ರರಕ್ಷಕ ಕೈಗವಸುಗಳು ಅಥವಾ ಬಾಹ್ಯ ಲೆಗ್ ಗಾರ್ಡ್‌ಗಳನ್ನು ಧರಿಸಿ ಫೀಲ್ಡಿಂಗ್‌ ಮಾಡಿದರೆ ಅದು ಅಕ್ರಮ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ತಕ್ಷಣವೇ ಬಾಬರ್‌ ಅಕ್ರಮ ಫೀಲ್ಡಿಂಗ್‌ ಗೆ ವಾರ್ನಿಂಗ್‌ ನೀಡಿದ ಅಂಪೈರ್, ವೆಸ್ಟ್‌ ಇಂಡೀಸ್‌ ತಂಡಕ್ಕೆ ಐದು ಪೆನಾಲ್ಟಿ ರನ್‌ ಗಳನ್ನು ಘೋಷಿಸಿದರು.

ರಾಷ್ಟ್ರೀಯ ತಂಡವನ್ನು ಮುನ್ನಡೆಸುವಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕನೇ ನಿಯಮ ಉಲ್ಲಂಘಿಸಿದ್ದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನವು 120 ರನ್‌ಗಳಿಂದ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!