ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೆಸೆಜಿಂಗ್ ಅಪ್ಲಿಕೇಷನ್ ಟೆಲೆಗ್ರಾಮ್ ಇನ್ನು ಮುಂದೆ ಪ್ರೀಮಿಯಂ ಅವತರಣಿಕೆಯನ್ನು ಬಿಡುಗಡೆಮಾಡಲಿದೆ. ಈ ಕುರಿತು ಟೆಲಿಗ್ರಾಮ್ ಸಿಇಒ ಖಚಿತಪಡಿಸಿದ್ದು ಶೀಘ್ರದಲ್ಲೇ ಹೊಸ ರೂಪ ಬಿಡುಗಡೆಯಾಗಲಿದೆ ಎಂದಿದ್ದಾರೆ.
ʼಟೆಲಿಗ್ರಾಮ್ಗೆ ತನ್ನ ಬಳಕೆದಾರರಿಂದಲೇ ಹಣಸಂದಾಯವಾಗುತ್ತಿದೆಯೇ ಹೊರತು ಜಾಹಿರಾತುದಾರರಿಂದಲ್ಲ ಎಂದು ಸಿಇಒ ಡುರೊವ್ ಹೇಳಿದ್ದು ಜೂನ್ ಅಂತ್ಯದ ವೇಳೆಗೆ ಪ್ರೀಮಿಯಂ ವರ್ಷನ್ ಬಿಡುಗಡೆಯಾಗಲಿದ್ದು ಕೆಲ ವಿಶಿಷ್ಟ ಆಪ್ಶನ್ಗಳಿಗೆ ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ ಎಂದಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಸಂಗತಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ ಹೊಸತಾಗಿ ಬರುವ ವೈಶಿಷ್ಟ್ಯತೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೀಮಿಯಂ ಚಂದಾದಾಋರಿಗೆ ಕೆಲ ಹೆಚ್ಚುವರಿ ಸೌಲಭ್ಯಗಳು ಸಿಗಲಿದ್ದು ಪೇಡ್ ವರ್ಷನ್ ಹೆಚ್ಚು ವೇಗ ಮತ್ತು ಹೆಚ್ಚಿನ ರಿಸೋರ್ಸ್ ಹೊಂದಿರುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಹೊಸ ಫೀಚರ್ಗಳು ಪ್ರೀಮಿಯಂ ಚಂದಾದಾರರಿಗೆ ಮೊದಲು ಸಿಗಲಿವೆ.