ಸಹಜ ಹೆರಿಗೆಯಿಂದ ಜನಿಸಿದ ಮಗುವಿಗೆ ರೋಗ ನಿರೋಧಕತೆ ಹೆಚ್ಚು – ಸಂಶೋಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಹಜ ಹೆರಿಗೆಯಿಂದ ಜನಿಸಿದ ಮಗುವಿಗೆ ರೋಗ ನಿರೋಧಕತೆ ಹೆಚ್ಚಿರುತ್ತದೆ. ಆದರೆ ಸಿಝೇರಿಯನ್‌ ಮೂಲಕ ಜನಿಸುವ ಮಕ್ಕಳಲ್ಲಿ ಈ ರೋಗನಿರೋಧಕತೆಯ ಪ್ರಮಾಣ ಕಡಿಮೆಯಿರುತ್ತದೆ ಎಂಬಂಶವನ್ನು ಸ್ಕಾಟಿಷ್‌ ಹಾಗು ಡಚ್ ಅಧ್ಯಯನವೊಂದು ಬಹಿರಂಗ ಪಡಿಸಿದೆ.

ಸಂಶೋಧನೆಯ ಪ್ರಕಾರ, ಮಗು ತಾಯಿಯ ಗರ್ಭದಿಂದ ಜನಿಸುವಾಗು ಅದು ಸಹಜ ಹೆರಿಗೆಯಾದರೆ ಹುಟ್ಟುವ ಮಗುವಿನಲ್ಲಿ ನೈಸರ್ಗಿಕವಾಗಿಯೇ ರೋಗನಿರೋಧಕತೆಯು ಹೆಚ್ಚಿರುತ್ತದೆ. ಹಾಗಾಗಿ ಜನಿಸಿದ ನಂತರ ನೀಡುವ ಲಸಿಕೆಗಳ ನಂತರ ಈ ಮಕ್ಕಳಲ್ಲಿ ಉತ್ಪತ್ತಿಯಾಗುವ ಪ್ರತಿರಕ್ಷಣಾ ವ್ಯವಸ್ಥೆಯು ದ್ವಿಗುಣಗೊಂಡಿದ್ದು ಹೆಚ್ಚು ಬಲಿಷ್ಟವಾಗಿರುತ್ತದೆ ಎನ್ನಲಾಗಿದೆ.

ಹಾಗೆಂದ ಮಾತ್ರಕ್ಕೆ ಸಿಜೇರಿಯನ್‌ ಮೂಲಕ ಜನಿಸಿದ ಶಿಶುಗಳಲ್ಲಿ ರೋಗನಿರೋಧಕತೆಯೇ ಇರುವುದಿಲ್ಲವೆಂದಲ್ಲ. ಸಹಜ ಹೆರಿಗೆಯಮೂಲಕ ಜನಿಸಿದ ಶಿಶುಗಳಿಗೆ ಹೋಲಿಕೆ ಮಾಡಿದರೆ ಇವರಲ್ಲಿ ತುಸು ಕಡಿಮೆಯಯಿರುತ್ತದೆ. ಅಂದರೆ ಜನನದ ನಂತರ ನೀಡುವ ಲಸಿಕೆಗಳ ಜೊತೆಗೆ ಇನ್ನೂ ಕೆಲವು ಪ್ರೋಬಯಾಟಿಕ್‌ಗಳು ಅಥವಾ ಹೆಚ್ಚುವರಿ ಲಸಿಕೆಗಳನ್ನು ಸೇರಿಸಬೇಕಾಗಬಹುದು ಎನ್ನಲಾಗಿದೆ.

ನಾವು ಜನ್ಮಪಡೆಯುವ ಸಂದರ್ಭದಲ್ಲಿ ಗರ್ಭಾಶಯವೆಂಬ ರಕ್ಷಣಾಕೋಟೆಯಿಂದ ಹೊರಬಂದು ಸೂಕ್ಷ್ಮಾಣುಜೀವಿಗಳಿಂದ ತುಂಬಿದ ಪ್ರಂಚಕ್ಕೆ ತೆರೆದುಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ವೈರಸ್‌ಗಳು ಮತ್ತು ಆರ್ಕಿಯಾ ಸೇರಿದಂತೆ ಹಲವು ಸೂಕ್ಷ್ಮಜೀವಿಗಳು ನಮ್ಮ ದೇಹವನ್ನು ಮನೆಯನ್ನಾಗಿಸಿಕೊಂಡು ನಮ್ಮ ಮಾನವ ಜೀವಕೋಶಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಇವು ಒಂದು ಸೂಕ್ಷ್ಮಾಣುಪರಿಸರವನ್ನು ನಮ್ಮ ದೇಹದಲ್ಲಿ ನಿರ್ಮಿಸುತ್ತವೆ. ಇವಿಗಳ ಮುಖ್ಯ ಪಾತ್ರವೆಂದರೆ ನಮ್ಮ ಜೀವನದ ಶುರುವಿನಲ್ಲಿ ನಮ್ಮ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸುವುದು.

ಸಹಜ ಹೆರಿಗೆಯ ಸಂದರ್ಭದಲ್ಲಿ ತಾಯಿಯ ಗರ್ಭಾಶಯದಲ್ಲಿನ ಕೆಲ ಉಪಯುಕ್ತ ಸೂಕ್ಷ್ಮಾಣುಜೀವಿಗಳು ಶಿಶುವಿನ ದೇಹಕ್ಕೆ ಪ್ರವಶಿಸುವುಯದರಿಂದ ಸಹಜವಾಗಿ ಜನಿಸಿದ ಮಗುವಿನಲ್ಲಿ ರೋಗನಿರೋಧಕ ವ್ಯವಸ್ಥೆಯು ಸಿಜೆರಿಯನ್‌ ವಿಧಾನದಲ್ಲಿ ಜನಿಸಿರುವ ಮಗುವಿಗಿಂತ ಹೆಚ್ಚಿರುತ್ತದೆ ಎಂಬ ಅಂಶವನ್ನು ಸಂಶೋಧನೆಗಳು ತೆರೆದಿಟ್ಟಿವೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!