Wednesday, February 28, 2024

CINE | ಬಚ್ಚನ್ ಮನೆ ಮನಸ್ತಾಪ ಬೀದಿಗೆ, ಇನ್ಸ್ಟಾಗ್ರಾಮ್‌ನಲ್ಲಿ ಸೊಸೆ ಅನ್‌ಫಾಲೋ ಮಾಡಿದ ಮಾವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ಅಮಿತಾಬ್ ಬಚ್ಚನ್ ಕೂಡ ಐಶ್ವರ್ಯಾ ರೈಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೀ 74 ಜನರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ. ಇದರಲ್ಲಿ ಬಾಲಿವುಡ್ ಹಲವು ನಟಿಯರಿದ್ದಾರೆ. ಆದರೆ ಸೊಸೆ ಐಶ್ವರ್ಯಾ ರೈ ಇಲ್ಲ.

ಈ ಮೊದಲು ಫಾಲೋ ಮಾಡಿ ನಂತರ ಅನ್‌ಫಾಲೋ ಮಾಡಿದ್ದಾರೋ ಅಥವಾ ಫಾಲೋ ಮಾಡಿಯೇ ಇಲ್ಲವೋ ಫ್ಯಾನ್ಸ್‌ಗೆ ತಿಳಿದಿಲ್ಲ. ಒಟ್ಟಾರೆ ಡಿವೋರ್ಸ್ ಸುದ್ದಿಗೆ ಈ ಅನ್‌ಫಾಲೋ ವಿಷಯ ಪುಷ್ಠಿ ನೀಡಿದ್ದು, ಇದು ನಿಜವೋ ಇಲ್ಲವೋ ಬಚ್ಚನ್ ಕುಟುಂಬವೇ ಉತ್ತರ ನೀಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!