ಹೊಸದಿಗಂತ ಡಿಜಿಟಲ್, ಮಂಗಳೂರು:
ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಮಾಜಿ ಶಾಸಕ ಕೆ. ರಘುಪತಿ ಭಟ್, 24 ತಾಸಿನ ಒಳಗಾಗಿ ಸ್ಪರ್ಧಾ ಕಣದಿಂದ ನಿವೃತ್ತಿ ಘೋಷಿಸಬೇಕು, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಸಮಾಧಾನ, ಅನ್ಯಾಯ ನಡೆದಿದ್ದರೆ ಅದನ್ನು ಪಕ್ಷವು ತನ್ನ ಚೌಕಟ್ಟಿನೊಳಗೆ ಸರಿಪಡಿಸುತ್ತದೆ. ಇಂತಹಾ ಬೆಳವಣಿಗೆ ಶೋಭೆಯಲ್ಲ ಎಂದಿದ್ದಾರೆ. ನಾವು ನಮ್ಮ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ಇದರ ಜೊತೆಗೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ ಅವರು, ನಾವು ಈ ಸ್ಪರ್ಧಾ ಕಣದಿಂದ ರಘುಪತಿ ಭಟ್ ಅವರ ನಿವೃತ್ತಿ ಘೋಷಣೆಯ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.