Tuesday, February 27, 2024

ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆ: ರಜೆ ಘೋಷಿಸಲು ಈಶ್ವರಪ್ಪ ಒತ್ತಾಯ

ಹೊಸದಿಗಂತ, ಶಿವಮೊಗ್ಗ:

ಜನವರಿ 22 ರಂದು ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಜಾ ಘೋಷಣೆ ಮಾಡಬೇಕು ಎಂದು  ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿ, ಐದು ನೂರು ವರ್ಷಗಳ ನಂತರ ರಾಮ ಮಂದಿರ ಸಿಗುತ್ತಿದೆ. ವಿಗ್ರಹ ಪ್ರತಿಷ್ಠಾಪನೆ ನೂರಾರು ಕೋಟಿ ಭಾರತೀಯರಿಗೆ ಸಂತಸದ ದಿನ. ರಾಮ ಮಂದಿರ ಜಾಗದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ನೋಡಲು ಜನರಿಗೆ ಅವಕಾಶ ಆಗಬೇಕು. ಸಂತೋಷ ದಿಂದ ಭಾಗವಹಿಸಲು ಆಗಬೇಕು. ಅದಕ್ಕಾಗಿ ರಜಾ ಘೋಷಣೆ ಮಾಡಬೇಕು ಎಂದರು.

ಅನೇಕ ಚರ್ಚೆ ಆಗುತ್ತಿದೆ ರಾಮನ ಇತಿಹಾಸ ಬಗ್ಗೆ. ಆದರೆ ಈಗ ಎಲ್ಲರಿಗೂ ಸಂತಸ ಇದೆ. ಸಾಕಷ್ಟು ಮುಸ್ಲಿಂ, ಕ್ರಿಶ್ಚಿಯನ್ ಜನರೂ ಹೋಗುತ್ತಿದ್ದಾರೆ ಎಂದರು. ನಮ್ಮ ರಾಜಕೀಯ ಬೇರೆ. ರಾಮನ ಬಗ್ಗೆ ಇಡೀ ಪ್ರಪಂಚದ ಜನರಲ್ಲಿ ಮೆಚ್ಚುಗೆ ಇದೆ. ಕೆಲವರು ರಾಜಕೀಯ ಮಾತು ನಿಲ್ಲಿಸಿ. ಇಡೀ ಪ್ರಪಂಚದಲ್ಲಿ ಹಿಂದೂ‌ ಧರ್ಮದ ಬಗ್ಗೆ ಗೌರವ ಬಂದಿದೆ. ಮಹಾತ್ಮ ಗಾಂಧಿ ಸಮಾಧಿಯಲ್ಲಿ ಕೂಡಾ ಹೇ ರಾಮ್ ಎಂದು ಬರೆದಿದೆ. ಒಳ್ಳೆಯ ವಾತಾವರಣ ಸೃಷ್ಟಿ ಆಗಿದೆ. ಇಡೀ ಪ್ರಪಂಚಕ್ಕೆ ನೆಮ್ಮದಿ ಸಿಗುತ್ತಿದೆ ಎಂದರು.

ಮುಂದಿನ ಜನ್ಮದಲ್ಲಿ ಏನು ಸಿಗುತ್ತದೆ ಗೊತ್ತಿಲ್ಲ. ಮಥುರಾ, ಕಾಶಿ ಇತ್ಯಾದಿ ಮುಂದೆ ಏನಾಗುತ್ತದೋ ಗೊತ್ತಿಲ್ಲ. ಹಾಗಾಗಿ ಎಲ್ಲರೂ ಮೌನವಾಗಿ ಇರುವುದು ಒಳ್ಳೆಯದು. ಸುಮ್ಮನೆ ಮಾತನಾಡುವುದು ಸಣ್ಣತನ ಆಗುತ್ತದೆ,‌ ಕಾಂಗ್ರೆಸ್ ಅನೇಕ ವ್ಯಕ್ತಿಗಳು ಇದು‌ ಬಿಜೆಪಿ ಕಾರ್ಯಕ್ರಮ ಎಂದಿದ್ದಾರೆ. ಭಾರತ್ ಜೋಡೋ ಮಾಡಲು ರಾಹುಲ್‌ ಗಾಂಧಿಗೆ ಸಾಧ್ಯವೇ? ಬಾಯಲ್ಲಿ ಹೇಳಿಕೊಂಡು ಹೊರಟರೆ ಆಗಲ್ಲ. ಅವರ ತಾತ ಭಾರತ ಇಬ್ಭಾಗ ಮಾಡಿದ್ದಾರೆ ಎಂದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಗದೀಶ್ , ಚಂದ್ರಶೇಖರ್, ಶಿವರಾಜ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!