ಕೇಂದ್ರ ಬಜೆಟ್‌ ಹಿನ್ನೆಲೆ: 400 ಪಾಯಿಂಟ್‌ ಪುಟಿದ ಸೆನ್ಸೆಕ್ಸ್, ನಿಫ್ಟಿ ಎಷ್ಟಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2023ರ ಬಜೆಟ್‌ ಮಂಡಿಸಲಿದ್ದು ಹೂಡಿಕೆದಾರರು ಬಜೆಟ್ 2023 ರ ಸೂಚನೆಗಳಿಗಾಗಿ ಕಾಯುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯಲ್ಲಿಯೂ ಉತ್ಸಾಹ ಪುಟಿದಿದೆ. ಪ್ರಮುಖ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್‌ 375.02 ಅಂಕಗಳು ಅಥವಾ 0.63 ಶೇ. ಏರಿಕೆಯಾಗಿ 59,924.92 ಕ್ಕೆ ತಲುಪಿದೆ. ಎನ್‌ಎಸ್‌ಯ ನಿಫ್ಟಿ 50 ಯು 126.05 ಅಥವಾ 0.71 ಶೇ. ಏರಿಕೆಯಾಗಿ 17,788.20 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:‌
ಸೆನ್ಸೆಕ್ಸ್‌ನಲ್ಲಿ ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಟಾಪ್ ಗೇನರ್ ಆಗಿದ್ದರೆ, ಐಟಿಸಿ, ಸನ್ ಫಾರ್ಮಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಲೂಸರ್‌ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!