ಬಿಜೆಪಿ ಅಧಿಕಾರವಧಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಆದ್ಯತೆ: ಅಣ್ಣಾಮಲೈ

ಹೊಸದಿಗಂತ ವರದಿ,ರಾಯಚೂರು:

ಸ್ವಾತಂತ್ರ್ಯ ನಂತರದಲ್ಲಿ ಭಾರತದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜಕೀಯವಾಗಿ ಉನ್ನತ ಹುದ್ದೆಗಳು ದೊರೆತಿದ್ದರೆ ಅದು ಭಾರತೀಯ ಜನತಾಪಕ್ಷದ ಅಧಿಕಾರವಧಿಯಲ್ಲಿ ಮಾತ್ರ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಶನಿವಾರ ನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ೬೦ ವರ್ಷಗಳಿಗೂ ಅಧಿಕ ಕಾಲ ಅಧಿಕಾರ ನಡೆಸಿದರೂ ದೇಶದ ರಾಷ್ಟ್ರಪತಿಗಳಂತಹ ಉನ್ನತ ಸ್ಥಾನವನ್ನು ಹಿಂದುಳಿದವರಿಗೆ ಮತ್ತು ಅಲ್ಪ ಸಂಖ್ಯಾತ ಸಮುದಾಯದವರಿಗೆ ನೀಡಲೇ ಇಲ್ಲ ಎಂದರು.

ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಕಾಲಾವಧಿಯಲ್ಲಿ ಅಬ್ಯುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರು. ನರೇಂದ್ರ ಮೋದಿ ಸರ್ಕಾರದ ಕಲಾವಧಿಯಲ್ಲಿ ರಾಮನಾಥ್ ಕೋವಿಂದ್ ಮತ್ತು ದ್ರೌಪತಿ ಮರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡುವ ಮೂಲಕ ಹಿಂದುಳಿದ ಸಮುದಾಯಗಳಿಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು.

ನೆರೆ ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನಾಗಳು ಭಾರತದ ಮುಂದಿನ ಪ್ರಧಾನಿ ದುರ್ಬಲರಾಗಿರಬೇಕೆಂದು ಆಶಿಸುತ್ತಿವೆ. ಅವರಿಗೆ ರಾಹುಲ್ ಗಾಂಧಿ ಪ್ರಧಾನಿ ಆದರೆ ಒಳ್ಳೆಯದು ಎಂಬ ಲೆಕ್ಕವನ್ನು ಹಾಕುತ್ತಿವೆ. ಆದರೆ ದೇಶದ ಜನತೆ ಮಾತ್ರ ದೇಶದ ಪ್ರಗತಿ ಮತ್ತು ಭದ್ರತೆಗೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲು ಬಯಸುತ್ತಿದ್ದಾರೆ ಎಂದು ತಿಳಿಸಿದರು.

ಭಾರತದ ಹಿತದೃಷ್ಠಿಯಿಂದ ಸಮರ್ಥ, ಧೈರ್ಯವಾಗಿ ಕಠಿಣ ನಿರ್ಣಯಗಳನ್ನು ತಗೆದುಕೊಳ್ಳುವ ನಾಯಕತ್ವ ಗುಣಗಳು ಇರುವುದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮಾತ್ರ. ಪ್ರಸಕ್ತ ಜರಗುತ್ತಿರುವ ಲೋಕಸಭಾ ಚುನಾವಣೆಯನ್ನು ಅಮೇರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳು ಭಾರತದ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂದು ಬಹಳ ಕುತೂಹಲದಿಂದ ಗಮನಿಸುತ್ತಿವೆ. ಈ ಚುನಾವಣೆ ನರೇಂದ್ರ ಮೋದಿಯವರ ಚುನಾವಣೆ ಆಗಿದೆ. ಅವರಿವರೆನ್ನು ಆಯ್ಕೆ ಇಲ್ಲಿಲ್ಲ ಕೇವಲ ಮೋದಿಯವಿಗೆ ಮಾತ್ರ ಎಂದು ತಿಳಿದು ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟçಗಳು ಓರ್ವ ವ್ಯಕ್ತಿಯನ್ನು ನಾಯಕನನ್ನಾಗಿ ಗುರುತಿಸಿದ್ದರೆ ಅದು ನರೇಂದ್ರ ಮೋದಿಯವರು ಮಾತ್ರ ಎಂದರೆ ತಪ್ಪಾಗಲಾರದು. ಏಶಿಯಾ ಪೆಸಿಫಿಕ್‌ದಲ್ಲಿ ನರೇಂದ್ರ ಮೋದಿಯವರು ಏನು ನಿರ್ಧಾರ ತಗೆದುಕೊಳ್ಳುತ್ತಾರೆ ಎಂದು ವಿಶ್ವ ಕುತೂಹಲದಿಂದ ನೋಡುತ್ತದೆ ಎಂದರೆ ಭಾರತದ ಸಾಮರ್ಥ್ಯ ಎಷ್ಟು ಹೆಚ್ಚಾಗಿದೆ ಎನ್ನುವುದನ್ನು ನಾವಿಂದು ಗಮನಿಸಬೇಕಾಗಿದೆ ಹಾಗೂ ಭಾರತ ಇನ್ನು ಬಲಿಷ್ಟವಾಗಿ ಬೆಳೆದು ನಿಲ್ಲುವುದಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದರು.

೨೦೦ ವರ್ಷಗಳಲ್ಲಿ ೧೫೦ ವರ್ಷಗಳು ಬ್ರಟೀಷರ ಮುಂದೆ. ಸ್ವಾತಂತ್ರ್ಯ ನಂತರದ ೫೦ ವರ್ಷಗಳಕಾಲ ಅಮೇರಿಕದ ಮುಂದೆ ಕೈಕಟ್ಟಿ ನಿಲ್ಲುವಂತಹ ಸ್ಥಿತಿ ಭಾರತದ್ದಾಗಿತ್ತು. ಆದರೆ, ದೇಶದ ನಾಯಕತ್ವ ಬದಲಾವಣೆ ಆದ ನಂತರದಲ್ಲಿ ದೇಶದ ಗೌರವ, ಪ್ರತಿಷ್ಟೆ ಅಷ್ಟೇ ಅಲ್ಲ ದೇಶದ ವಿದೇಶಾಂಗ ನೀತಿಗಳಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಿದೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!