ಮನೆಯ ಹಿತ್ತಲಲ್ಲಿ ಬೆಳೆಸಿದ್ದ ಗಾಂಜಾ ಗಿಡ ಪೊಲೀಸ್ ವಶಕ್ಕೆ: ಆರೋಪಿಯ ಬಂಧನ

ಹೊಸ ದಿಗಂತ ವರದಿ, ಮುಂಡಗೋಡ:

ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.4ರ ಟಿಬೇಟಿಯನ್ ವ್ಯಕ್ತಿಯೋರ್ವ ಮನೆಯ ಹಿತ್ತಲಲ್ಲಿ ಬೆಳೆಸಿದ್ದ 52ಗಾಂಜಾ ಗಿಡಗಳನ್ನು ಪೊಲೀಸರು ವಶ ಪಡಿಸಿಕೊಂಡ ಘಟನೆ ಸೋಮವಾರ ಜರುಗಿದೆ.
ಕ್ಯಾಂಪ್ ನಂ.4ರ ನಾಮಗೇಲ್ ಚೋಪೇಲ್ ಎಂಬ ಟಿಬೇಟಿಯನ್ ವ್ಯಕ್ತಿಯೂ ಆಕ್ರಮವಾಗಿ ತನ್ನ ಮನೆಯ ಹಿಂಬದಿಯ ಹಿತ್ತಲಲ್ಲಿ ಗಾಂಜಾ ಗಿಡಗಳನ್ನು ಬೆಳೆಸಲಾಗಿದ್ದು ಎರಡರಿಂದ ಆರು ಪೋಟ್ ಎತ್ತರದ ವರೆಗೆ ಗಿಡಗಳನ್ನು ಬೆಳೆಸಲಾಗಿದ್ದು 6.9ಕೆಜಿ ತೂಕದ ತೊಂಬತ್ತು ಸಾವಿರ ರೂ ಮೌಲ್ಯದ ಗಾಂಜಾ ಗಿಡಗಳನ್ನು ವಶ ಪಡಿಸಿಕೊಂಡಿದ್ದು ಗಾಂಜಾ ಬೆಳೆಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಎಸ್.ಪಿ. ಸುಮನ್ ಪೇನ್ನೆಕರ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ,ಡಿವೈಎಸ್ಪಿ ರವಿ ನಾಯ್ಕ, ಮಾಗ೯ದಶ೯ನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ,ಪಿಎಸ್ಐ ನಿಂಗಪ್ಪ ಜಕ್ಕಣ್ಣವರ,ಪೋಪಶನರಿ ಪಿಎಸ್ಐ ಮಹೇಶ ನಾಳೆ, ಸಿಬ್ಬಂದಿಗಳಾದ ಸೋಮಶೇಖರ ಮೇತ್ರಿ,ಗಣಪತಿ ಹೊಸಳ್ಳಿ, ತಿರುಪತಿ ಚೌಡಣ್ಣವರ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ಸಂಜು ರಾಠೋಡ, ಮಾದೇವ, ಅರುಣ, ಶಂಭು, ನಾಗರಾಜ, ಶಾಲಿನಿ ಕಾಯಾ೯ಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!