ವಿಜಯಪುರದ ಶಾಲೆಗಳಲ್ಲಿ ಕುವೆಂಪು ಬರಹ ಬದಲಾವಣೆ: ಶಾಲೆ ಕೊಟ್ಟ ಸ್ಪಷ್ಟನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಬರಹವನ್ನು ತೆಗೆದು ಹಾಕಿ ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎನ್ನುವ ಬದಲಾವಣೆ ಮಾಡಲಾಗಿದೆ.

ಕುವೆಂಪು ಬರಹ ಬದಲಾವಣೆ ಮಾಡಿದ್ದಕ್ಕಾಗಿ ಈ ವಿಷಯ ತೀವ್ರ ಚರ್ಚೆಗೆ ಗುರಿಯಾಗಿದೆ. ಸಮಾಜ ಕ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರು ಶಾಲೆಗಳು ಇದಾಗಿದ್ದು ರಾಜ್ಯಾದ್ಯಂತ ವಿಷಯ ವಿವಾದಕ್ಕೀಡಾಗಿದೆ.

ಇದೀಗ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ಪಷ್ಟನೆ ನೀಡಿದ್ದಾರೆ. ವಿಜಯಪುರದಲ್ಲಿ ಒಟ್ಟು 23 ಮೊರಾರ್ಜಿ ದೇಸಾಯಿ ಶಾಲೆಗಳಿವೆ. ಇದರಲ್ಲಿ ಎರಡು ಶಾಲೆಗಳಲ್ಲಿ ಮಾತ್ರ ಈ ರೀತಿ ಬರಹ ಬದಲಾವಣೆ ಮಾಡಲಾಗಿದೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಆದೇಶದ ಮೇಲೆ ಈ ರೀತಿ ಬದಲಾವಣೆ ಮಾಡಿದ್ದೇವೆ. ಆದರೆ ಅವರು ಟೆಲಿಗ್ರಾಂನಲ್ಲಿ ಸೂಚನೆ ನೀಡಿದ್ದರು. ಈ ಬಗ್ಗೆ ಸರ್ಕಾದ ಸುತ್ತೋಲೆ ಇಲ್ಲ ಎಂದಿದ್ದಾರೆ.

ಈ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ ಎನ್ನುವ ಉದ್ದೇಶದಿಂದ ಈ ರೀತಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ವಸತಿ ಶಾಲೆಗಳಿಗೆ ಮಕ್ಕಳನ್ನು ಕಳಿಸಿದ ಪೋಷಕರಿಗೆ ನೂರಾ ಎಂಟು ಆತಂಕಗಳು ಇರುತ್ತವೆ. ಹಾಗಾಗಿ ಇವುಗಳ ಬಗ್ಗೆ ಪ್ರಶ್ನೆ ಮಾಡಿ ತಿಳಿದುಕೊಳ್ಳಲಿ ಎನ್ನುವುದು ಬರವಣಿಗೆ ಆಶಯವಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!