ಬೇಡ ಅಂದ್ರೂ ಮುತ್ತು ಕೊಡೋಕೆ ಬಂದ ಫ್ಯಾನ್, ಆದಿತ್ಯ ರಾಯ್ ಕಪೂರ್ ಮಾಡಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಆದಿತ್ಯ ರಾಯ್ ಕಪೂರ್‌ಗೆ ಫ್ಯಾನ್ ಸಮಸ್ಯೆಯೊಂದು ಎದುರಾಗಿದೆ. ಮಹಿಳಾ ಫ್ಯಾನ್ ಒಬ್ಬರು ಆದಿತ್ಯಗೆ ಮುತ್ತು ಕೊಡಲು ಮುಂದಾಗಿದ್ದಾರೆ, ಸಮ್ಮತಿ ಇಲ್ಲ ಎಂದು ಹೇಳಿದರೂ ಮತ್ತೆ ಮಹಿಳೆ ಮುತ್ತು ನೀಡಲು ಬಂದಿದ್ದು, ಬಾಡಿಗಾರ್ಡ್ಸ್ ಅವರನ್ನು ಪಕ್ಕಕ್ಕೆ ಕಳಿಸಿದ್ದಾರೆ.

ಈ ಬಗ್ಗೆ ಆದಿತ್ಯ ಮಾತನಾಡಿದ್ದು, ನನಗೆ ಭಯ ಅಥವಾ ಮುಜುಗರ ಆಗಿಲ್ಲ, ಆ ಸಮಯಕ್ಕೆ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೋ ಹಾಗೆ ಮಾಡಿದ್ದೇವೆ, ನನಗೆ ಅರ್ಥ ಆಗುತ್ತದೆ. ಅವರು ಪ್ರೀತಿಯನ್ನು ತೋರಿಸೋ ವಿಧಾನ ಅದಾಗಿತ್ತು ಅಷ್ಟೆ. ಈ ವಿಷಯವನ್ನು ಇಲ್ಲೇ ಬಿಡ್ತೇನೆ, ನಾಳೆಗೆ ಮರೆತು ಹೋಗ್ತಿನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!