ಭಯಾನಕ ವಿಡಿಯೋ: ರಸ್ತೆ ಮೇಲೆ ಭಾರೀ ಗುಡ್ಡಕುಸಿತ, ಕಾಲ್ಕಿತ್ತ ಯಾತ್ರಾರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬದರಿನಾಥ ಯಾತ್ರಿಕರು ಪ್ರತಿ ಹೆಜ್ಜೆ-ಹೆಜ್ಜೆಯಲ್ಲೂ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆಯಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಯಾತ್ರಾರ್ಥಿಗಳಿಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಬದರಿನಾಥ ಹೆದ್ದಾರಿ ಹೆಲಾಂಗ್‌ನಲ್ಲಿ ಭಾರೀ ಪ್ರಮಾಣದ ಅವಶೇಷಗಳು ಬೆಟ್ಟದಿಂದ ಕುಸಿದಿದ್ದು, ರಸ್ತೆಯನ್ನು ಮುಚ್ಚಲಾಗಿದೆ. ಇದರೊಂದಿಗೆ ಪ್ರವಾಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದರಿನಾಥಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಆಯಾ ಪ್ರದೇಶಗಳಲ್ಲಿ ಕಾಯುವಂತೆ ಪೊಲೀಸರು ಸೂಚಿಸಿದ್ದಾರೆ. ಗೌಚಾರ್, ಕರ್ಣ ಪ್ರಯಾಗ ಮತ್ತು ಲಂಗಾಸು ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ.

ಬದರಿನಾಥ್ ಹೆದ್ದಾರಿಯಲ್ಲಿ ಭೂಕುಸಿತದ ಭಯಾನಕ ವಿಡಿಯೋ ವೈರಲ್ ಆಗಿದೆ. ಭಾರಿ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ವಾಹನಗಳ ಮೂಲಕ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಾಂಗ್ ತಲುಪಿದರು. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಯಾತ್ರಾರ್ಥಿಗಳು ಸ್ಥಳದಿಂದ ಕಾಲ್ಕಿತ್ತದ್ದಾರೆ.

ಈ ವೇಳೆ ವಾತಾವರಣ ಅನುಕೂಲಕರವಾಗಿಲ್ಲದ ಕಾರಣ ಯಾತ್ರಾರ್ಥಿಗಳು ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಭೂಕುಸಿತಗಳನ್ನು ರಕ್ಷಣಾ ಕಾರ್ಯಕರ್ತರು ತೆರವುಗೊಳಿಸುತ್ತಿದ್ದಾರೆ. ಹೆಲಾಂಗ್‌ನ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕುಸಿದ ಮಣ್ಣನ್ನು ತೆಗೆದ ನಂತರ ಯಾತ್ರಾರ್ಥಿಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು, ಅಲ್ಲಿಯವರೆಗೆ ಯಾತ್ರಾರ್ಥಿಗಳು ಸುರಕ್ಷಿತ ಪ್ರದೇಶಗಳಲ್ಲಿ ಕಾಯುವಂತೆ ಕರ್ಣ ಪ್ರಯಾಗ ಸಿಒ ಅಮಿತ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!