March 22, 2026
Sunday, March 22, 2026
spot_img

ಬಾಗಲಕೋಟೆ ಗಲಭೆ: ಕಿಡಗೇಡಿಗಳ ವಿರುದ್ಧ ‘ಗೂಂಡಾ ಕಾಯ್ದೆ’ ಅಡಿ ಕ್ರಮಕ್ಕೆ ಯತ್ನಾಳ್ ಆಗ್ರಹ

ಹೊಸದಿಗಂತ ವಿಜಯಪುರ:

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಆಕ್ರೋಶ ಹೊರಹಾಕಿರುವ ಅವರು, ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮಸೀದಿಗಳಿಂದ ಕಲ್ಲು ಮತ್ತು ಚಪ್ಪಲಿ ಎಸೆದ ಕಿಡಗೇಡಿಗಳನ್ನು ಪತ್ತೆಹಚ್ಚಿ, ಅವರ ಮೇಲೆ ತಕ್ಷಣವೇ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು.

ಗಲಭೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ವೈದ್ಯಕೀಯ ವೆಚ್ಚ ಮತ್ತು ಪರಿಹಾರವನ್ನು ಸಂಬಂಧಪಟ್ಟ ಮಸೀದಿ ಆಡಳಿತ ಮಂಡಳಿಯೇ ಭರಿಸಬೇಕು.

ಇಂತಹ ಘಟನೆಗಳು ಮರುಕಳಿಸಿದರೆ, ಅಂತಹ ಸ್ಥಳಗಳ ವಿದ್ಯುತ್ ಹಾಗೂ ನೀರು ಸರಬರಾಜನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರ ತಕ್ಕ ಪಾಠ ಕಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ಮೊಘಲರನ್ನೇ ನಡುಗಿಸಿದ ವೀರ ಶಿವಾಜಿ ಮಹಾರಾಜರ ಜಯಂತಿಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದು ಖಂಡನೀಯ,” ಎಂದು ಯತ್ನಾಳ್ ಕಿಡಿಕಾರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !