Wednesday, November 30, 2022

Latest Posts

ಬಾಗಲಕೋಟೆ: ವಿವೇಕ ಶಾಲಾ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

ಹೊಸದಿಗಂತ ವರದಿ, ಬಾಗಲಕೋಟೆ:
ರಾಜ್ಯದ್ಯಂತ 8100 ವಿವೇಕ ಶಾಲಾ ಕೊಠಡಿಗಳ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಯೋಜನೆಯಂತೆ ಬಾಗಲಕೋಟೆಯ ಸರಕಾರಿ ಬಾಲಕ ಬಾಲಕಿಯರ ಬಾಲಮಂದಿರದಲ್ಲಿ ನೂತನ ವಿವೇಕ ಶಾಲಾ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಡಾ.ವೀರಣ್ಣ ಚಾರಂತಿಮಠ ಅವರು ನೆರವೇರಿಸಿದರು.
ಜಿಲ್ಲಾಧಿಕಾರಿಗಳಾದ ಪಿ ಸುನೀಲಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಭೂಬಾಲನ್ ಅಸಿಸ್ಟೆಂಟ್ ಕಮಿಷರಾದ ಶ್ವೇತಾ ಬಿಡಕರ್, ಕ್ಷೇತ್ರ ಶಿಕ್ಷಣ ಅಧಿಕಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!