ನಟ ದರ್ಶನ್ ಗೆ ಜಾಮೀನು: ಖುಷಿ ಹಂಚಿಕೊಂಡ ಸ್ಯಾಂಡಲ್​ವುಡ್​ ತಾರೆಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಇನ್ನೂ ನಟ ದರ್ಶನ್​ಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದ ವಿಚಾರ ಕೇಳಿ ಸ್ಯಾಂಡಲ್​ವುಡ್​ ನಟ ನಟಿಯರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಗೂ ಸ್ಟೋರಿ ಶೇರ್​ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ ನಟಿ, ನಟ ದರ್ಶನ್​ ಆಪ್ತ ಗೆಳತಿ ರಕ್ಷಿತಾ ಪ್ರೇಮ್​ ಕೂಡ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಹೂವಿನ ಜೊತೆಗೆ ಹ್ಯಾಪಿ ನ್ಯೂಸ್​, ಹ್ಯಾಪಿ ಡೇ ಅಂತ ಬರೆದುಕೊಂಡಿದ್ದಾರೆ.

ನಟ ಧನ್ವೀರ್ ಗೌಡ ದರ್ಶನ್​ ಜೊತೆಗೆ ವೇದಿಕೆ ಮೇಲೆ ನಿಂತುಕೊಂಡಿರೋ ಫೋಟೋದಲ್ಲಿ ಉಸಿರು ಇರುವವರೆಗೂ ಇರುತ್ತೇವೆ ನಿಮ್ಮಿಂದೆ ಅಂತ ಬರೆದುಕೊಂಡಿದ್ದಾರೆ.

ಮತ್ತೊಂದು ಕಡೆ ತರುಣ್​ ಸುಧೀರ್ ಹಾಗೂ ಸೋನಲ್ ದಂಪತಿ ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತರುಣ್​ ಸುಧೀರ್ ಅವರು ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು ಅಂತ ದರ್ಶನ್ ಅವರ ಫೋಟೋವನ್ನು ಶೇರ್ ಮಾಡಿಕೊಂದ್ದಾರೆ, ಜೊತೆಗೆ ಸೋನಲ್ ಕಾಟೇರ ಸಿನಿಮಾದ ಸಾಂಗ್​ ಜೊತೆಗೆ ಇಮೋಜಿ ಹಾಕಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!