ಇತ್ತ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್‌ಗೆ ಜಾಮೀನು: ಅತ್ತ ದ್ರೌಪದಿ ವಸ್ತ್ರಾಹರಣದ ಚಿತ್ರ ಪೋಸ್ಟ್ ಮಾಡಿದ ಸ್ವಾತಿ ಮಲಿವಾಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂಕೋರ್ಟ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್‌ಗೆ ಜಾಮೀನು ನೀಡಿದ್ದು, ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕಿ ಸ್ವಾತಿ ಮಲಿವಾಲ್ ಅವರು ಮಂಗಳವಾರ ದ್ರೌಪದಿಯ ವಸ್ತ್ರಾಹರಣ ಮಾಡಲು ದುಶ್ಶಾಸನ ಪ್ರಯತ್ನಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಈ ಚಿತ್ರವನ್ನು ಮಾತ್ರ ಮಲಿವಾಲ್ ಪೋಸ್ಟ್ ಮಾಡಿದ್ದು, ಅವರು ಬೇರೇನೂ ಬರೆದಿಲ್ಲ. ಹಿಂದು ಮಹಾಕಾವ್ಯ ಮಹಾಭಾರತದಲ್ಲಿ, ದುಶ್ಶಾಸನನು ದ್ರೌಪದಿಯನ್ನು ವಸ್ತ್ರಾಪಹರಣ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಕೌರವರ ವಿರುದ್ಧದ ಯುದ್ಧದಲ್ಲಿ ಪಾಂಡವರಿಗೆ ಮಾರ್ಗದರ್ಶನ ನೀಡುವ ಭಗವಾನ್ ಕೃಷ್ಣನ ದೈವಿಕ ಹಸ್ತಕ್ಷೇಪದಿಂದ ದ್ರೌಪದಿಯನ್ನು ರಕ್ಷಿಸುತ್ತಾನೆ.

Imageಇತ್ತ ಮೇ 13 ರಂದು, ಮುಖ್ಯಮಂತ್ರಿಯ ಸಿವಿಲ್ ಲೈನ್ಸ್ ನಿವಾಸದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ದಿನಗಳ ನಂತರ, ಅವರನ್ನು ಕೇಜ್ರಿವಾಲ್ ಅವರ ಮನೆಯಿಂದ ಪೊಲೀಸರು ಬಂಧಿಸಿದ್ದರು.

https://x.com/SwatiJaiHind/status/1830808593244860568?ref_src=twsrc%5Etfw%7Ctwcamp%5Etweetembed%7Ctwterm%5E1830808593244860568%7Ctwgr%5E3ecf00b8a85d343a2adf200b924625e49f506655%7Ctwcon%5Es1_&ref_url=https%3A%2F%2Ftv9kannada.com%2Fnational%2Fswati-maliwals-cryptic-vastraharan-post-following-supreme-court-bail-for-bibhav-kumar-895682.html

ಇದೀಗ ಸುಪ್ರೀಂಕೋರ್ಟ್ ಬಿಭವ್ ಕುಮಾರ್‌ಗೆ ಜಾಮೀನು ನೀಡಿದ್ದು, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಕುಮಾರ್ ಅವರು ಸಿಎಂ ನಿವಾಸಕ್ಕೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಹೆಚ್ಚುವರಿಯಾಗಿ, ‘ದುರ್ಬಲ’ ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ಅವರು ಪ್ರಕರಣದ ಕುರಿತು ಬಿಭವ್ ಕುಮಾರ್ ಏನೂ ಮಾತನಾಡುವಂತಿಲ್ಲ ಎಂದು ಹೇಳಿದೆ.

ಮಲಿವಾಲ್ ಎಎಪಿಯಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥರಾಗಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!