ಮೂರನೇ ತ್ರೈಮಾಸಿಕದ ಲಾಭದಲ್ಲಿ 23 ಶೇಕಡಾ ಏರಿಕೆ ದಾಖಲಿಸಿದ ಬಜಾಜ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಡಿಸೆಂಬರ್‌ ತಿಂಗಳಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಜಾಜ್‌ ಆಟೋ ತನ್ನ ಲಾಭದಲ್ಲಿ 23 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಬಜಾಜ್‌ ಆಟೋ ಒಟ್ಟಾರೆ 1,491 ಕೋಟಿ ರೂ. ಲಾಭ ಗಳಿಸಿದ್ದು ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 1,214 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ಲಾಭದಲ್ಲಿ23 ಶೇಕಡಾ ಬೆಳವಣಿಗೆ ದಾಖಲಾಗಿದೆ ಎಂದು ಕಂಪನಿ ಹೇಳಿದೆ.

ತ್ರೈಮಾಸಿಕ ಕಾರ್ಯಾಚರಣೆಯಿಂದ ಒಟ್ಟಾರೆ ಆದಾಯವು 9,315 ಕೋಟಿ ರೂ.ಗಳಷ್ಟಿದ್ದು ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 9,022 ಕೋಟಿ ರೂ. ಗಳಷ್ಟಿತ್ತು. ಕಂಪನಿಯ ರಫ್ತಿನಲ್ಲಿ ತುಸು ಇಳಿತ ಕಂಡುಬಂದಿದೆಯಾದರೂ ದೇಶೀಯ ಮಾರಾಟದಲ್ಲಿನ ಹೆಚ್ಚಳವು ಈ ಇಳಿಕೆಯನ್ನು ಸರಿದೂಗಿಸಿದೆ ಎಂದು ಬಜಾಜ್ ಕಂಪನಿ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ. ‌

ಕಂಪನಿಯು ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ಆದಾಯದಲ್ಲಿ ಎರಡು ಅಂಕಿಯ ಬೆಳವಣಿಗೆಯನ್ನು ದಾಖಲಿಸಿದೆ. ಹಬ್ಬದ ಋತುವಿನಲ್ಲಿ 125 ಸಿಸಿ ದ್ವಿಚಕ್ರ ವಾಹನಗಳು ಹಾಗು ತ್ರಿಚಕ್ರ ವಾಹನಗಳ ಮಾರಾಟದಲ್ಲಿನ ಹೆಚ್ಚಳವು ಲಾಭದಾಯಕತೆಗೆ ಹೆಚ್ಚಿನ ಕೊಡುಗೆ ನೀಡಿವೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!