ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಹಸುಗಳ ರಕ್ಷಣೆ ಮಾಡಿದ ಬಜರಂಗದಳ

ಹೊಸದಿಗಂತ ವರದಿ, ತುಮಕೂರು:

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಕರ್ಫ್ಯೂ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಗೌರಿಬೀದನೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಗೋವುಗಳನ್ನು ತುಮಕೂರು ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ನೇತೃತ್ವದ ತಂಡ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಧುಗಿರಿ ತಾ ಬಡವನಹಳ್ಳಿ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಸಿದೆ. ಕಾಟಗೊಂಡನ ಹಳ್ಳಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಮಾಂಸಕ್ಕಾಗಿ ಸಾಗಿಸಲು ಸಂಗ್ರಹಿಸಲಾಗುತ್ತು. ಆ ವೇಳೆ ಶೆಡ್ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ, ಸತತ 18 ಗಂಟೆಗಳ ಕಾರ್ಯಾಚರಣೆ ನಡೆಸಿ 6 ಗೋವುಗಳನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಬಜರಂಗದಳದ ಕಾರ್ಯಕರ್ತರು ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಈ ಕರ್ಮವನ್ನು ತಡೆಯಲು ಹೋದ ಬಜರಂಗದಳದ ಕಾರ್ಯಕರ್ತ ರವಿ ಕುಮಾರ್ ಮೇಲೆ 7-8 ಜನ ಗೋ ಕಳ್ಳರು ಹಲ್ಲೆ ನಡೆಸಿದ್ದು, ಅವರನ್ನು ಮಧುಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವುಗಳನ್ನು ಸಾಗಿಸಲು ಬಳಸಲಾಗಿದ್ದ KA-64-4678 ವಾಹನವನ್ನು   ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಗೋವುಗಳನ್ನು ಆಂಧ್ರಪ್ರದೇಶದ ಗುಡಿಬಂಡೆ ಸಂತೆಯಿಂದ ಗೌರಿಬೀದನೂರಿನ  ಅಸಲೀಪುರದ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದು, ಕೋಟಗೊಂಡನಹಳ್ಳಿಯ  ಶಿರಡಿಸಾಯಿಬಾಬ ಆಶ್ರಮದ ಬಳಿ ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!