ಮಂಡ್ಯದಿಂದ ಕಳವಾದ ಬಾಲಾಜಿ ವಿಗ್ರಹ ತಮಿಳುನಾಡಿನಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕರ್ನಾಟಕದ ಮಂಡ್ಯದ ದೇವಸ್ಥಾನವೊಂದರಿಂದ ಕಳವು ಮಾಡಲಾಗಿದ್ದ ಬಾಲಾಜಿ ದೇವರ ಪ್ರಭಾವಶಾಲಿ ವಿಗ್ರಹವನ್ನು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಸಂಸ್ಥೆಯು ತಿಳಿಸಿದೆ.
ಪುರಾತನ ವಿಗ್ರಹ ಕಳ್ಳಸಾಗಾಣಿಕೆದಾರರಂತೆ ಸೋಗುಹಾಕಿಕೊಂಡಿದ್ದ ಕೇಂದ್ರ ವಲಯ ಹೆಚ್ಚುವರಿ ಡಿಎಸ್ಪಿ ಬಾಲಮುರುಗನ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಇಲಾಂಗೋ ಮತ್ತಿತರರಿದ್ದ ವಿಗ್ರಹ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಬಾಲಾಜಿ ವಿಗ್ರಹವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಬಾಲಾಜಿ ವಿಗ್ರಹವನ್ನು ಕೆಲವು ವರ್ಷಗಳ ಹಿಂದೆ ಮಂಡ್ಯದ ದೇವಸ್ಥಾನದಿಂದ ದೇವಸ್ಥಾನದ ಪೂಜಾರಿಯೇ ಕದ್ದು ಗೋಬಿಚೆಟ್ಟಿಪಾಳ್ಯದ ವಕೀಲರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕದ್ದ ಪುರಾತನ ವಿಗ್ರಹಗಳನ್ನು ಮರುಪಡೆಯುವ ಪ್ರಯತ್ನದ ಭಾಗವಾಗಿ, ಸಿಐಡಿ ಘಟಕದ ಇಬ್ಬರು ಎಸ್‌ಐಗಳಾದ ಪಾಂಡ್ಯರಾಜನ್ ಮತ್ತು ರಾಜೇಶ್ ಅವರು ʼಶ್ರೀಮಂತ ವಿಗ್ರಹ ಕಳ್ಳಸಾಗಣೆದಾರʼ ಸೋಗಿನಲ್ಲಿ  ಅವಿನಾಶಿ ರಸ್ತೆಯಲ್ಲಿ ಕಾಫಿ ಶಾಪ್‌ನಲ್ಲಿ ಬ್ರೋಕರ್ ರನ್ನು ಸಂಪರ್ಕಿಸಿದರು.
ರಹಸ್ಯ ಪೊಲೀಸರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಬ್ರೋಕರ್ ತನ್ನ ಹಳೆಯ ಸ್ನೇಹಿತನಿಂದ 600 ವರ್ಷಗಳಷ್ಟು ಹಳೆಯದಾದ ಬಾಲಾಜಿ ವಿಗ್ರಹವನ್ನು ಪಡೆದಿರುವ ವಿಚಾರ ಬಾಯಿ ಬಿಟ್ಟಿದ್ದ. ಅದನ್ನು ಅವರಿಗೆ 33 ಕೋಟಿ ರೂಪಾಯಿಗೆ ಮಾರಬಹುದು ಎಂದಿದ್ದ. ವಿಗ್ರಹ ವಿಭಾಗದ ಅಧಿಕಾರಿಗಳು ವಿಗ್ರಹವನ್ನು ಖರೀದಿಸಲು ಆಸಕ್ತಿ ತೋರಿದಾಗ ಅವರು ಮರುದಿನ ಪುರಾತನ ವಿಗ್ರಹವನ್ನು ತೋರಿಸುವುದಾಗಿ ಹೇಳಿದ್ದ ಎಂದು ವಿಗ್ರಹ ವಿಭಾಗದ ಡಿಜಿಪಿ ಕೆ ಜಯಂತ್ ಮುರಳಿ ಹೇಳಿದರು.
ಭರವಸೆ ನೀಡಿದಂತೆ, ಬ್ರೋಕರ್ ಅವರನ್ನು ವಿಐಪಿ ಮುತ್ತುನಗರ, ನಾಗರಪಾಳ್ಯಂ, ಗೋಬಿಚೆಟ್ಟಿಪಾಳ್ಯಂನಲ್ಲಿ ವಾಸಿಸುವ ವಕೀಲರ ಮನೆಗೆ ಕರೆದೊಯ್ದು ವಿಗ್ರಹವನ್ನು ತೋರಿಸಿದರು. ವಿಗ್ರಹವನ್ನು ಖರೀದಿಸುವ ಮೊದಲು ಅದರ ಪುರಾತನತೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಪರೀಕ್ಷಿಸಲು ಅವಕಾಶ ನೀಡುವಂತೆ ಎಸ್‌ಐಗಳು ದಲ್ಲಾಳಿಗೆ ಮನವಿ ಮಾಡಿದರು.
“ಅವರು ಮರುದಿನ ನವೆಂಬರ್ 6 ರಂದು ಮಾರಾಟಗಾರರ ನಿವಾಸಕ್ಕೆ ಭೇಟಿ ನೀಡಿ ವಿಗ್ರಹ ವಶಪಡಿಸಿಕೊಳ್ಳಲಾಗಿದೆ,” ಎಂದು ಡಿಜಿಪಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!