ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ವಿಧಾನಸಭೆ ಅಧಿವೇಶನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅಧಿವೇಶನ ಆರಂಭವಾದಾಗಿನಿಂದ ಟಿಡಿಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಚಂದ್ರಬಾಬು ಬಂಧನ ಕಾನೂನು ಬಾಹಿರ ಎಂದು ಘೋಷಣೆ ಕೂಗುತ್ತಿದ್ದಾರೆ. ಸಭಾಧ್ಯಕ್ಷರ ವೇದಿಕೆ ಬಳಿ ಭಿತ್ತಿಪತ್ರ ಹಿಡಿದು ಧರಣಿ ನಡೆಸಿದರು. ಈ ನಡುವೆ ಚಂದ್ರಬಾಬು ನಾಯ್ರು ಬಂಧನದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂದು ಶಾಸಕ ಬಾಲಕೃಷ್ಣ ಮೀಸೆ ತಿರುವಿದ ದೃಶ್ಯ ಕಂಡುಬಂತು.
ಶಾಸಕ ಕೋಟಂರೆಡ್ಡಿ ,ಶ್ರೀಧರ್ ರೆಡ್ಡಿ ಸ್ಪೀಕರ್ ಮೈಕ್ ಧ್ವಂಸ ಮಾಡಲು ಯತ್ನಿಸಿದರು. ಟಿಡಿಪಿ, ವೈಸಿಪಿ ಶಾಸಕರ ನಡುವಿನ ಗಲಾಟೆ ಘರ್ಷಣೆ ಹಂತಕ್ಕೆ ತಲುಪಿದ್ದರಿಂದ ತಾಳ್ಮೆಯಿಂದ ವರ್ತಿಸುವಂತೆ ಸ್ಪೀಕರ್ ಸೂಚಿಸಿದರು. ವಾಗ್ವಾದದಿಂದ ಸದನದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.
ವಿಧಾನಸಭೆಯಲ್ಲಿ ಟಿಡಿಪಿ ಶಾಸಕ ನಂದಮೂರಿ ಬಾಲಕೃಷ್ಣ ಮೀಸೆ ತಿರುವಿದ್ದಕ್ಕೆ ಪ್ರತಿಯಾಗಿ ಬಿಯ್ಯಪು ಕೂಡ ನಿಮಗೇನಾ ಮೀಸೆ ಇರೋದು ನಮಗಿಲ್ವಾ ಎಂದು ಅವರೂ ಪೈಪೋಟಿಗಿಳಿದರು. ಸಿನಿಮಾದಲ್ಲಿ ಮೀಸೆ ತಿರುವಿ ಇಲ್ಲಲ್ಲ ಎಂದು ಬಾಲಕೃಷ್ಣಗೆ ಸಚಿವ ಅಂಬಟಿ ರಾಂಬಾಬು ಪ್ರತಿದಾಳಿ ನಡೆಸಿದರು.
ಭಾರೀ ಗಲಾಟೆ ಭುಗಿಲೆದ್ದಿದ್ದರಿಂದ ಸ್ಪೀಕರ್ ವಿಧಾನಸಭೆ ಅಧಿವೇಶನವನ್ನು ಮುಂದೂಡಿದರು.