ಪಾಕ್ ವಿರುದ್ಧ ಫೀಲ್ಡಿಂಗ್ ವೇಳೆ ಹಣೆಗೆ ಬಡಿದ ಚೆಂಡು: ರಚಿನ್‌ ರವೀಂದ್ರ ತಲೆಯಿಂದ ಸುರಿದ ರಕ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್

ಪಾಕ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಹಿಡಿಯಲು ಹೋಗಿ ನ್ಯೂಜಿಲೆಂಡ್​ನ ಪ್ಲೇಯರ್​ ಹಾಗೂ ಕನ್ನಡಿಗ ರಚಿನ್ ರವೀಂದ್ರ ಅವರ ತಲೆಗೆ ಬಾಲ್ ಬಡಿದು ರಕ್ತ ಸುರಿದಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ವ್ಯವಸ್ಥೆ ಎಲ್ಲವೂ ಸರಿಯಾಗಿದೆಯೆಂದು ಜಗತ್ತಿನೆದುರು ಖಾತ್ರಿ ಪಡಿಸಲು ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿಕೋನ ಸರಣಿ ಏರ್ಪಡಿಸಿದೆ.

ಪಾಕಿಸ್ತಾನದ ಇನ್ನಿಂಗ್ಸ್‌ನ 38ನೇ ಓವರ್ ನಲ್ಲಿ ರಚಿನ್ ರವೀಂದ್ರ ಅವರು ಸ್ಕ್ವೇರ್‌ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಖುಷ್ದಿಲ್ ಶಾ ಹೊಡೆದ ಸ್ವೀಪ್ ಶಾಟ್ ನೇರವಾಗಿ ರಚಿನ್ ರವೀಂದ್ರ ಅವರ ಕಡೆಗೆ ಹೋಗಿತ್ತು. ಮಾಮಾಲಿ ಫೀಲ್ದರ್ ಅಲ್ಲಿದ್ದಿದ್ದರೂ ಕ್ಲೀಯರ್ ಕ್ಯಾಚ್ ಆಗುತ್ತಿತ್ತು. ಹಾಗೆಯೇ ಗುಡ್‌ ಫೀಲ್ಡರ್‌ ಕೂಡ ಆಗಿರುವ ರಚಿನ್‌ ಕ್ಯಾಚ್‌ ಕ್ಲಿಯರ್‌ ಮಾಡುತ್ತಾರೆ ಎಂಬ ವಿಶ್ವಾಸ ಕಿವೀಸ್‌ ಆಟಗಾರರಿಗೂ ಇತ್ತು. ಆದ್ರೆ ಅಲ್ಲಿ ಆಗಿದ್ದೇ ಬೇರೆ.

ಕ್ಯಾಚ್‌ ಅಗಿ ಕೈಸೇರಬೇಕಾದ ಚೆಂಡು ನೇರವಾಗಿ ಹೋಗಿ ರಚಿನ್ ರವೀಂದ್ರ ಅವರ ಹಣೆವಗೆ ಬಡಿಯಿತು. ಅವರಿಗೆ ಚೆಂಡು ಬಂದ ದಾರಿಯನ್ನು ಕೊಂಚವೂ ಅಂದಾಜಿಸಲು ಸಾಧ್ಯವಾಗಿಲ್ಲ. ಚೆಂಡು ಹಣೆಗೆ ಬಡಿಯುತ್ತಿದ್ದಂತೆ ಅಲ್ಲಿಯೇ ರಚಿನ್‌ ಕುಸಿದು ಬಿದ್ದಿದ್ದಾರೆ. ಏನಾಗುತ್ತಿದೆ ಎಂದು ಎಲ್ಲರೂ ಗಾಬರಿಯಾಗಬೇಕಾದರೆ ಅವರ ಮುಖದಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ನ್ಯೂಜಿಲೆಂಡ್ ತಂಡದ ಫಿಸಿಯೋ ಮತ್ತು ಮೈದಾನದಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರ ಮುಖವನ್ನು ಟವೆಲ್‌ನಿಂದ ಮುಚ್ಚಿಕೊಂಡು ಮೈದಾನದಿಂದ ಹೊರ ನಡೆದರು.

ರಚಿನ್ ರವೀಂದ್ರ ಅವರ ಹಣೆಯಿಂದ ರಕ್ತ ಸೋರುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದೀಗ ಅವರ ಗಾಯದ ಪ್ರಮಾಣ ಏನು ಎಂದು ತಿಳಿದು ಬಂದಿಲ್ಲ. ಗಾಯದ ತೀವ್ರತೆ ನೋಡಿದರೆ ಅವರು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡುವುದೂ ಅನುಮಾನ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯೂಜಿಲೆಂಡ್ ತಂಡದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಈವರೆಗೂ ಹೊರಬಿದ್ದಿಲ್ಲ.

ಪಾಕ್‌ ಕ್ರೀಡಾಂಗಣದ ವಿರುದ್ಧ ಟೀಕೆ:
ರಚಿನ್‌ ರವೀಂದ್ರರು ಗಾಯಗೊಳ್ಳಲು ಗಡಾಫಿ ಸ್ಟೇಡಿಯಂನಲ್ಲಿ ಅಳವಡಿಸಲಾದ ಕಳಪೆ ಗುಣಮಟ್ಟದ ಫ್ಲಡ್‌ ಲೈಟ್‌ ವ್ಯವಸ್ಥೆಯೇ ಕಾರಣ ಎಂಬ ಟೀಕೆಯೂ ವ್ಯಕ್ತವಾಗಿದೆ. ಲೈಟಿಂಗ್ಸ್‌ ಸಮಸ್ಯೆಯಿಂದಾಗಿಯೇ ಚೆಂಡನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕೆಲವರು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!